ಜು.23ರಂದು ಬಿ.ಸಿ.ರೋಡಿನಲ್ಲಿ ದ.ಕ. ಬ್ಯಾರಿ ಕಲಾವಿದರ ವೇದಿಕೆಯ ಸಭೆ
Update: 2017-07-22 16:09 IST
ಬಂಟ್ವಾಳ, ಜು.22: ಬ್ಯಾರಿ ಯುವ ಪ್ರತಿಭೆಗಳಿಗೆ ತರಬೇತಿ, ಪ್ರೋತ್ಸಾಹದ ಕೊರತೆಯನ್ನು ನೀಗಿಸಲು ಹಾಗೂ ಅವರಿಗೆ ಸೂಕ್ತ ಬೆಂಬಲ ನೀಡುವ ಉದ್ದೇಶದೊಂದಿಗೆ ನೂತನವಾಗಿ ದ.ಕ. ಬ್ಯಾರಿ ಕಲಾವಿದರ ವೇದಿಕೆಯನ್ನು ರಚಿಸಲಾಗಿದೆ. ಇದರ ಪ್ರಥಮ ಸಭೆಯು ಜು.23ರಂದು ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ಆಯೋಜಿಸಲಾಗಿದೆ.
ಅಂದು ಮಧ್ಯಾಹ್ನ 1:30ಕ್ಕೆ ನಡೆಯುವ ಸಭೆಯಲ್ಲಿ ಬ್ಯಾರಿ ಕಲಾವಿದರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲಿ ಭಾಗವಹಿಸುವಂತೆ ವೇದಿಕೆಯ ಮಾಧ್ಯಮ ಪ್ರತಿನಿಧಿ ಆಶಿಕ್ ಅಲಿ ಪುತ್ತೂರು ಪ್ರಕಟನೆಯಲ್ಲಿ ಕೋರಿದ್ದಾರೆ.