‘ಆಣ್‌ಮಗೆ’ ತುಳು ಚಲನಚಿತ್ರಕ್ಕೆ ಮುಹೂರ್ತ
ಮಂಗಳೂರು, ಜು.22: ಸಂಗತಿ ಕ್ರಿಯೇಶನ್ಸ್ ವತಿಯಿಂದ ನಿರ್ಮಾಣವಾಗಲಿರುವ ‘ಆಣ್‌ಮಗೆ’ ತುಳು ಚಲನಚಿತ್ರಕ್ಕೆ ಇಂದು ತೆಲಿಕೆದ ಬೊಳ್ಳಿ ಖ್ಯಾತಿಯ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್‌ರವರು ‘ಕ್ಲಾಪ್’ ಮೂಲಕ ಮುಹೂರ್ತ ಕಾರ್ಯ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಕರಾವಳಿಯ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಯವರು ಎಲ್ಲಾ ಭಾಷೆಯ ಚಲನಚಿತ್ರಗಳನ್ನು ವೀಕ್ಷಿಸಿದಾಗ ಇಲ್ಲಿನ ಚಿತ್ರರಂಗ ಬೆಳೆಯಲು ಸಾಧ್ಯ ಎಂದರು.
ವಿಶ್ವ ಕೊಂಕಣಿ ಮುಖ್ಯಸ್ಥ ಬಸ್ತಿ ವಾಮನ ಶೆಣೈ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಲಕುಮಿ ತಂಡದ ಮುಖ್ಯಸ್ಥ ಕಿಶೋರ್ ಡಿ. ಶೆಟ್ಟಿ, ಕಲಾ ಸಂಗಮದ ವಿಜಯ ಕುಮಾರ್ ಕೊಡಿಯಾಲ್‌ಬೈಲ್,ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಪ್ರಕಾಶ್ ಪಾಂಡೇಶ್ವರ, ವಾಲ್ಟರ್ ನಂದಳಿಕೆ ಮೊದಲಾದವರು ಉಪಸ್ಥಿತರಿದ್ದು ಚಿತ್ರ ಹಾಗೂ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಟಿ.ಎನ್. ಶ್ಯಾನುಭಾಗ್ ಹಾಗೂ ಚಿತ್ರದ ನಿರ್ದೇಶಕ ಹೆರಿ ಫೆರ್ನಾಂಡಿಸ್ ಹಾಗೂ ನಿಮಾಪಕರಾದ ಸಿರಿಲ್, ವಾಲ್ಟರ್, ಲಿಯೋ ಉಪಸ್ಥಿತರಿದ್ದರು.