ಸುರಿಬೈಲು ದಾರುಲ್ ಅಶ್-ಅರಿಯ್ಯ ಆಂಗ್ಲ ಮಾಧ್ಯಮ ಶಾಲೆ: ವಿದ್ಯಾರ್ಥಿ ನಾಯಕನಾಗಿ ರಾಫಿಹ್
Update: 2017-07-22 17:35 IST
ವಿಟ್ಲ, ಜು. 22: ಸುರಿಬೈಲು ದಾರುಲ್ ಅಶ್-ಅರಿಯ್ಯ ಆಂಗ್ಲ ಮಾಧ್ಯಮ ಶಾಲಾ ಚುನಾವಣೆ ಇತ್ತೀಚೆಗೆ ನಡೆಯಿತು.
ವಿದ್ಯಾರ್ಥಿ ನಾಯಕನಾಗಿ ಮುಹಮ್ಮದ್ ರಾಫಿಹ್, ಉಪನಾಯಕನಾಗಿ ಮುಹಮ್ಮದ್ ಸಿಫಾನಾ, ಸಾಂಸ್ಕೃತಿಕ ಸಚಿವನಾಗಿ ನಬೀಸತುಲ್ ಸಿಫಾನಾ, ಸ್ವಚ್ಛತಾ ಸಚಿವರುಗಳಾಗಿ ಸಹ್‌ಲ ಅಫ್ಸೀನಾ ಹಾಗೂ ನಿಹ್‌ಮ ಫಾತಿಮಾ, ಕ್ರೀಡಾ ಸಚಿವರಾಗಿ ಬಾತಿಶ್ ಹಾಗೂ ಫಾಯಿರ್, ಆರೋಗ್ಯ ಸಚಿವನಾಗಿ ಸಫ್ನಾರ್, ಶಿಸ್ತು ಸಚಿವರಾಗಿ ಮುಹಮ್ಮದ್ ಮಸೂದ್ ಸಾಯಿಖ್ ಹಾಗೂ ಅರ್ಷೀನಾ, ವಿರೋಧ ಪಕ್ಷದ ನಾಯಕರಾಗಿ ಮುಹಮ್ಮದ್ ಸವಾದ್ ಹಾಗೂ ಆಫಿಯಾ ಅವರು ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕ ಎ.ಎಚ್. ನಾಸಿರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.