‘ಜೋಯಾಲುಕ್ಕಾಸ್’ನ ಲಕ್ಕಿಡಿಪ್ ಕೂಪನ್ ಡ್ರಾ
ಮಂಗಳೂರು, ಜು.22: ಚಿನ್ನ ಮತ್ತು ವಜ್ರಾಭರಣ ಸಂಸ್ಥೆಯಾದ ‘ಜೋಯಾಲುಕ್ಕಾಸ್’ ಹಮ್ಮಿಕೊಂಡಿರುವ ಲಕ್ಕಿಡಿಪ್ ಕೂಪನ್‌ನ ಡ್ರಾ ಕಾರ್ಯಕ್ರಮವು ನಗರದ ಫಳ್ನೀರ್ ರಸ್ತೆಯಲ್ಲಿರುವ ‘ಜೋಯಾಲುಕ್ಕಾಸ್’ ಚಿನ್ನಾಭರಣ ಮಳಿಗೆಯಲ್ಲಿ ಶನಿವಾರ ನಡೆಯಿತು.
ಚಿತ್ರನಟಿ ಚಿರಶ್ರೀ, ಮಧು ಎಂಟರ್‌ಪ್ರೈಸಸನ್ ಮಧುಸೂದನ್, ಶರ್ಮಿಳಾ ವಿನೋದ್ ಲಕ್ಕಿಡಿಪ್ ಕೂಪನ್‌ನ ಡ್ರಾ ಕಾರ್ಯಕ್ರಮ ನೆರವೇರಿಸಿದರು. ಬಳಿಕ ಮಾತನಾಡಿದ ಮೂವರು ಗಣ್ಯರು ಸುಮಾರು 130 ಮಳಿಗೆಗಳನ್ನು ಹೊಂದಿರುವ ಜೋಯಾಲುಕ್ಕಾಸ್ ಚಿನ್ನಾಭರಣ ಮಳಿಗೆಯು ಉತ್ಕೃಷ್ಟ ಗುಣಮಟ್ಟದ ಆಭರಣಗಳನ್ನು ನೀಡಿ ಗ್ರಾಹಕರ ವಿಶ್ವಾಸ ಗಳಿಸಿದೆ. ನಾವು ಕೂಡ ಈ ಮಳಿಗೆಯ ಗ್ರಾಹಕರೇ ಆಗಿದ್ದು, ಇಂದು ಅದೃಷ್ಟ ಚೀಟಿಯನ್ನು ಎತ್ತುವ ಅವಕಾಶ ಲಭಿಸಿದೆ ಎಂದರು.
ಈ ಸಂದರ್ಭ 20 ಅದೃಷ್ಟ ಶಾಲಿಗಳನ್ನು ಆಯ್ಕೆ ಮಾಡಲಾಯಿತು. ಅಲ್ಲದೆ, ಈ ಹಿಂದಿನ ಅದೃಷ್ಟ ಶಾಲಿಗಳಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಹಲವು ಗ್ರಾಹಕರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜೋಯಾಲುಕ್ಕಾಸ್‌ನ ಮಂಗಳೂರು ಬ್ರಾಂಚ್ ಮ್ಯಾನೇಜರ್ ಪ್ರವೀಣ್ ಕುಮಾರ್ ಎಂ.ಬಿ., ಉಡುಪಿ ಬ್ರಾಂಚ್ ಮ್ಯಾನೇಜರ್ ಮಾಯಾಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಈ ಅದೃಷ್ಟ ಕೂಪನ್ ಯೋಜನೆಯು ಆಗಸ್ಟ್‌ವರೆಗಿದ್ದು, ಪ್ರತೀ ವಾರ 1 ಕೂಪನ್ ಡ್ರಾ ಮಾಡಿ ಅದೃಷ್ಟ ಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಯೋಜನೆಯು ಭಾರತವಲ್ಲದೆ, ಯುಎಇ, ಬಹರೇನ್, ಕೆಎಸ್‌ಎ, ಒಮನ್, ಕತರ್, ಕುವೈತ್, ಸಿಂಗಾಪುರ, ಮಲೇಶಿಯಾ, ಯುಎಸ್‌ಎ, ಯುಕೆ ರಾಷ್ಟ್ರಗಳಲ್ಲಿರುವ 130 ಮಳಿಗೆಗಳಲ್ಲೂ ಲಭ್ಯವಿದೆ. ಚಿನ್ನಾಭರಣಗಳ ಮೇಲೆ 10 ಸಾವಿರ ರೂ. ವೆಚ್ಚ ಮಾಡಿ 1 ರ್ಯಾಫಲ್ ಕೂಪನ್ ಮತ್ತು ವಜ್ರಾಭರಣಗಳ ಮೇಲೆ 10 ಸಾವಿರ ರೂ. ವೆಚ್ಚ ಮಾಡಿ 2 ರ್ಯಾಫಲ್ ಕೂಪನ್ ಪಡೆಯಬಹುದಾಗಿದೆ.
ಶೇ.3 ಕ್ಯಾಶ್‌ಬ್ಯಾಕ್ ಆಫರ್‌ಗೆ ಚಾಲನೆ
‘ಜೋಯಾಲುಕ್ಕಾಸ್’ ಸಂಸ್ಥೆಯು ಶೇ.3ರ ಕ್ಯಾಶ್ ಬ್ಯಾಕ್ ಆಫರ್‌ಗೆ ಚಿತ್ರನಟಿ ಚಿರಶ್ರೀ ಚಾಲನೆ ನೀಡಿದರು. ಅಂದರೆ ಪ್ರತೀ ಗ್ರಾಹಕರು 10 ಸಾವಿರ ರೂ. ಮೌಲ್ಯದ ಆಭರಣ ಖರೀದಿಸಿದರೆ ಸ್ಥಳದಲ್ಲೇ 300 ರೂ. ಮರಳಿಸುವ ಯೋಜನೆ ಇದಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬ್ರಾಂಚ್ ಮ್ಯಾನೇಜರ್ ಪ್ರವೀಣ್ ಕುಮಾರ್ ಮನವಿ ಮಾಡಿದ್ದಾರೆ.