×
Ad

ಪ್ರತಿಯೊಂದು ಕಲೆಗೆ ಗುರುತಿಸುವಿಕೆ ಮುಖ್ಯ: ಪ್ರೊ.ವಿವೇಕ್ ರೈ

Update: 2017-07-22 20:44 IST

ಮಣಿಪಾಲ, ಜು.22: ಪ್ರತಿಯೊಂದು ಕಲೆಯು ಅದರದ್ದೇ ಆದ ಗುರುತನ್ನು ಹೊಂದಿರಬೇಕು. ಒಂದು ಕಲೆ ತನ್ನಿಂದ ಬೇರೆಯಾದ ಒಂದು ಗುಂಪಿನೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಿದಾಗ ಅದರ ಶಕ್ತಿಯ ಅರಿವಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ.ಬಿ.ಎ. ವಿವೇಕ್ ರೈ ಹೇಳಿದ್ದಾರೆ.

 ಮಣಿಪಾಲ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಕ್ರಿಯೇಟಿವ್ ಅಂಡ್ ಕುಲ್ಚರಲ್ ಸ್ಟಡೀಸ್, ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟ್ಟಾರಿಕಲ್ ರಿಸರ್ಚ್ ವತಿಯಿಂದ ಮಣಿಪಾಲ ಕೆಎಂಸಿಯ ಇಂಟರಾಕ್ಟ್ ಹಾಲ್ ನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ ‘ಭಾರತಿಯ ಕಲೆ ಮತ್ತು ಕಲಾ ಇತಿಹಾಸ: ಕರಾವಳಿ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳು’ ಎಂಬ ವಿಷಯದ ಕುರಿತ ವಿಚಾರಸಂಕಿರಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕರಾವಳಿಯ ವೈವಿಧ್ಯಮಯ, ರೋಮಾಂಚಕ ಮತ್ತು ಕ್ರಿಯಾತ್ಮಕ ಸ್ವಭಾವ ದಿಂದಾಗಿ ಮತ್ತು ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯಗಳ ನಡುವಿನ ಅಂತರ್ ಸಂಪರ್ಕದಿಂದಾಗಿ ಈ ಪ್ರದೇಶದಲ್ಲಿ ಬಹು ಸಂಸ್ಕೃತಿ ಇಂದಿಗೂ ಪ್ರಚಲಿತವಾಗಿದೆ ಎಂದು ಅವರು ತಿಳಿಸಿದರು.

ಕಲೆ ಸಂಸ್ಕೃತಿಯ ಅಧ್ಯಯನದಲ್ಲಿ ಕೇವಲ ಪಠ್ಯದ ಜ್ಞಾನಕ್ಕಿಂತ ಕ್ಷೇತ್ರ ಅಧ್ಯಯನ ಮುಖ್ಯವಾಗುತ್ತದೆ. ಕರಾವಳಿಯ ಸಂಸ್ಕೃತಿಯನ್ನು ಕೆಲವು ವಿಷಯಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಆದರೆ ಇಲ್ಲಿ ಸಾವಿರಾರು ಸಂಸ್ಕೃತಿಗಳು ನೆಲೆಯೂ ರಿವೆ. ಒಂದೊಂದು ಜಾತಿಗೆ, ಸಮುದಾಯಗಳಿಗೂ ತನ್ನದೆ ಆದ ಸಂಸ್ಕೃತಿಗಳು ಇವೆ ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿವಿ ಸಹಕುಲಪತಿ ಪ್ರೊ.ಪೂರ್ಣಿಮಾ ಬಾಳಿಗಾ ಮಾತನಾಡಿ, ಲಲಿತಕಲೆ ಮತ್ತು ಸಾಂಸ್ಕೃತಿಕ ಅಧ್ಯಯನದಲ್ಲಿ ಸ್ನಾತ ಕೋತ್ತರ ಪದವಿ ಮತ್ತು ಸಂಸ್ಕೃತಿ ಅಧ್ಯಯನ, ಲಲಿತಕಲೆ ಹಾಗೂ ಇತರ ಅಂತಃ ಶಾಸ್ತ್ರೀಯ ಶಿಕ್ಷಣಗಳಾದ ಸಂಗೀತ, ನೃತ್ಯ, ನಾಟಕ, ದೃಶ್ಯಕಲೆ, ಕಲಾ ಇತಿಹಾಸ, ಸಂಸ್ಕೃತಿ, ಜಾನಪದ, ಕಲೆ ಮತ್ತು ವಿನ್ಯಾಸ, ಇತಿಹಾಸ ವಿಷಯಗಳ ಅಧ್ಯಯನ ಕ್ಕಾಗಿ ಪಿಎಚ್‌ಡಿ ಸಂಶೋಧನಾ ಕೇಂದ್ರವನ್ನು ಮುಂದಿನ ವರ್ಷ ಆರಂಭಿಸ ಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಲಾ ಪ್ರದರ್ಶನದ ಕೈಪಿಡಿಗಳನ್ನು ಬಿಡುಗಡೆಗೊಳಿಸ ಲಾಯಿತು. ಎಂಜಿನಿಯರಿಂಗ್ ಮತ್ತು ವಾಣಿಜ್ಯ ವಿದ್ಯಾರ್ಥಿಗಳ ಆರ್ಟ್ ಅಪ್ರಿಷಿಯೇಷನ್ ಕೋರ್ಸ್‌ನ್ನು ಉದ್ಘಾಟಿಸಲಾಯಿತು. ಹಿರಿಯ ಕಲಾವಿದರಾದ ಪೀಟರ್ ಲೂವಿಸ್, ರಮೇಶ್ ರಾವ್, ಮೆರ್ಲಿನ್ ರಸ್ಕಿನ್, ಕೆ.ಲಕ್ಷ್ಮಣ್ ಭಟ್, ಗಣೇಶ ಸೋಮಾಯಾಜಿ ಅವರ ಎರಡು ದಿನಗಳ ಕಲಾಕೃತಿಗಳ ಪ್ರದರ್ಶನ ‘ಚಿತ್ರ ಕರಾವಳಿ’ಯನ್ನು ಸಹ ಉದ್ಘಾಟಿಸಲಾಯಿತು.

ಸೆಂಟರ್ ಫಾರ್ ಗಾಂಧಿಯನ್ ಆ್ಯಂಡ್ ಪೀಸ್ ಸ್ಟಡೀಸ್‌ನ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೆಂಟರಿನ ನಿರ್ದೇಶಕ ಪ್ರೊ.ಉನ್ನಿಕೃಷ್ಣನ್ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News