×
Ad

ಬಡ ಪ್ರತಿಭಾವಂತ 1700 ಮಂದಿಗೆ ವಿದ್ಯಾರ್ಥಿವೇತನ ವಿತರಣೆ

Update: 2017-07-22 20:48 IST

ಉಡುಪಿ, ಜು.22: ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಸಮಾಜದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ 1700 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಅವಿಭಜಿತ ದ.ಕ. ಜಿಲ್ಲೆಯ ಅಶಕ್ತ ಯಕ್ಷಗಾನ ಕಲಾವಿದರಿಗೆ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಶನಿವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

 ಕಾರ್ಯಕ್ರಮವನ್ನು ಉದ್ಘಾಟಿಸಿದ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ. ಶಂಕರ್ ಮಾತನಾಡಿ, ಅಂಕಗಳಿಕೆಯೊಂದೆ ವಿದ್ಯಾರ್ಥಿಗಳ ಗುರಿಯಾಗಿರ ಬಾರದು. ಜೊತೆಗೆ ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಶಿಕ್ಷಣ ಪಡೆಯುವುದಕ್ಕೆ ಆದ್ಯತೆ ನೀಡಬೇಕು. ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ ನೀಡುವ ಗೌರವ. ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಳೆದ 15 ವರ್ಷದಿಂದ ವಿದ್ಯಾರ್ಥಿವೇತನ ನೀಡುತ್ತಿದ್ದು, ಅದಕ್ಕಾಗಿ ವಾರ್ಷಿಕ 25 ಲಕ್ಷ ರೂ. ವ್ಯಯಿಸಲಾಗುತ್ತಿದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ 700 ವಿದ್ಯಾರ್ಥಿಗಳಿಗೆ ಹಾಗೂ ಸಾಗರ, ಶೃಂಗೇರಿ ಮತ್ತು ಚಿಕ್ಕಮಗಳೂರಿನ 800 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಶ್ರೀವತ್ಸ ರಾವ್, ಮಂಜೇಶ್ ಎಸ್., ಚಿನ್ಮಯಿ ಮತ್ತು ರಂಜಿತಾ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳಾದ ಅದಿತಿ ಕಿರಣ್, ಉತ್ಪಲಾ ಶೆಣೈ ಮತ್ತು ರಾಧಿಕಾ ಪೈ ಇವರನ್ನು ಸನ್ಮಾನಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಕಿದಿಯೂರು ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗಳಾದ ಅಂಜನಾ ಮತ್ತು ಅುೃತಾ ಅವರನ್ನು ಗೌರವಿಸಲಾಯಿತು.

ಅವಿಭಜಿತ ದ.ಕ. ಜಿಲ್ಲೆಯ ಅಶಕ್ತ ಯಕ್ಷಗಾನ ಕಲಾವಿದರಾದ ಕೊಪ್ಪಾಟೆ ಮುತ್ತ, ಜನ್ನಾಡಿ ಬಸವ ಬಳೆಗಾರ, ಕೆಪ್ಪೆಕೆರೆ ಮಹಾದೇವ ಹೆಗಡೆ, ನಾಗೇಶ ಭಂಡಾರಿ, ಸುಜನಾ ಸುಳ್ಯ, ಮುಡಿಪು ಕೃಷ್ಣ ಮತ್ತು ಬೇತ ಕುಂಞಿ ಕುಲಾಲ ಅವರನ್ನು ತಲಾ 25 ಸಾವಿರ ರೂ. ಸಹಾಯಧನದೊಂದಿಗೆ ಗೌರವಿಸಲಾ ಯಿತು. ಮಟಪಾಡಿ ನಾರಾಯಣ ನಾಯಕ್, ಸುಂದರ ರೈ ಬಜ್ಪೆ ಮತ್ತು ಯೋಗೀಶ ಕುಮಾರ್ ಹೆಬ್ಚೈಲ್ ಅವರ ಪರವಾಗಿ ಅವರ ಸಂಬಂಧಿಕರು ಧನ ಸಹಾಯ ಸ್ವೀಕರಿಸಿದರು.

ಅಧ್ಯಕ್ಷತೆಯನ್ನು ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಗಣೇಶ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉದ್ಯಮಿ ಶಿವಪ್ಪಟಿ.ಕಾಂಚನ್ ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ಆನಂದ ಎಸ್.ಕೆ. ಸ್ವಾಗತಿಸಿದರು. ಸಂಘಟನೆ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುವರ್ಣ ಬೈಕಾಡಿ ವಂದಿಸಿದರು. ಶಿವರಾಮ ಕೆ.ಎಂ. ಕಾರ್ಯಕ್ರಮ ನಿರೂ ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News