×
Ad

ತರಗತಿ ಪಾಠ ಸರಿಯಾಗಿ ಮನನ ಮಾಡಿದರೆ ಯಶಸ್ಸು: ಸಂಕೀರ್ತ್

Update: 2017-07-22 20:49 IST

ಉಡುಪಿ, ಜು.22: ತರಗತಿಯಲ್ಲಿ ಕಲಿತ ಪಾಠಗಳನ್ನು ಅದೇ ದಿನ ಸರಿ ಯಾಗಿ ಓದಿ ಮನನ ಮಾಡಿಕೊಂಡು ಅಭ್ಯಾಸ ನಡೆಸಿದರೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಈ ಸಾಲಿನ ನೀಟ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 4ನೆ ಹಾಗೂ ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾನ ಪಡೆದ ಉಡುಪಿ ಹಿರಿಯಡ್ಕ ಮೂಲದ ಸಂಕೀರ್ತ್ ಸದಾನಂದ ಹೇಳಿದ್ದಾರೆ.

ಇಂದ್ರಾಳಿಯ ಜೈದೇವ್ ಮೋಟಾರ್ಸ್‌ ಕಟ್ಟಡದ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಓದಿನ ಜೊತೆಗೆ ಮೊಬೈಲ್, ಟಿವಿ, ಯೂಟ್ಯೂಬ್‌ಗಳನ್ನು ವೀಕ್ಷಣೆ ಮಾಡು ತ್ತಿದ್ದೆ. ಇದರಲ್ಲಿ ಶಿಕ್ಷಣ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೆ. ಕಾಲೇಜಿನ ಪಾಠದ ಜೊತೆಗೆ ಟ್ಯೂಷನ್ ಹಾಗೂ ಖಾಸಗಿ ಕೋಚಿಂಗ್ ಪಡೆಯುತ್ತಿದ್ದೆ. ದಂತ ವೈದ್ಯ ನಾಗಬೇಕೆಂಬ ತನ್ನ ಛಲ ಓದಿಗೆ ಪೂರಕವಾಯಿತು. ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಉದ್ದೇಶವಿದ್ದು, ಐಎಎಸ್‌ನಂತ ನಾಗರಿಕ ಸೇವಾ ಕ್ಷೇತ್ರದಲ್ಲಿ ಹೋಗುವ ಯಾವುದೇ ಆಸಕ್ತಿ ಇಲ್ಲ ಎಂದರು.

ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಣ ಪೂರೈಸಿದ್ದು, ಮುಂದೆ ದೆಹಲಿಯ ಏಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರೆಸಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಂಕೀರ್ತ್ ತಂದೆ ಸದಾನಂದ ಪೂಜಾರಿ, ತಾಯಿ ಗೀತಾ ಪೂಜಾರಿ ಉಪಸ್ಥಿತರಿದ್ದರು. ರೇಣು ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News