ಗಾಯಾಳು ಮೇಸ್ತ್ರಿ ಮೃತ್ಯು
Update: 2017-07-22 21:52 IST
ಶಿರ್ವ, ಜು.22: ಕುತ್ಯಾರು ಗ್ರಾಮದ ಪಡು ಕುತ್ಯಾರು ಆನೆಗುಂದಿ ಮಠದ ಕಟ್ಟಡದ ಕಾಮಗಾರಿ ನಡೆಸುವ ವೇಳೆ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ತೇವುಕಾಡು ನಿವಾಸಿ ಹರೀಶ್ ಬೆಲ್ಚಾಡ(37) ಎಂಬವರು ಜು.20ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಇವರು, ಜೂ. 22ರಂದು ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವ ತುರಾತುರಿಯಲ್ಲಿ ಆಕಸ್ಮಿಕವಾಗಿ ಬಿದ್ದ ಗಾಯ ಗೊಂಡಿದ್ದರು. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.