ಪಾಣೆಮಂಗಳೂರು: ಬ್ಯಾರಿ ನಿಖಾಃ ಹೆಲ್ಪ್ ಲೈನ್ ನಿಂದ ವಲಯಾಭಿವೃದ್ಧಿ ಶಿಬಿರ

Update: 2017-07-23 06:09 GMT

*ಬಂಟ್ವಾಳ, ಜು. 22: ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ವತಿಯಿಂದ ಇಂದು ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ವಲಯಾಭಿವೃದ್ಧಿ ಶಿಬಿರ ನಡೆಯಿತು.

ಸಮುದಾಯದ ವಧು-ವರರ ವೈವಾಹಿಕ ಜೀವನಕ್ಕೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿ ವರ್ಷದಿಂದೀಚೆಗೆ ಕರ್ನಾಟಕದ ಹಲವು ಭಾಗಗಳಲ್ಲಿ  ಕಾರ್ಯಾಚರಿಸುತ್ತಿರುವ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡವು ಆರ್ಥಿಕವಾಗಿ ಹಿಂದುಳಿದಿರುವ ವಧು ವರರಿಗೆ ಮದುವೆ ವಸ್ತ್ರಗಳನ್ನೂ ನೀಡುತ್ತಾ ಬಂದಿದೆ.

ಬಂಟ್ವಾಳ ತಾಲೂಕಿನಲ್ಲಿ ವಾಸಿಸುವ ಸಮುದಾಯದ ಬಾಂಧವರು ಈ ಕಾರ್ಯದ ಉಪಯೋಗವನ್ನು ಪಡೆಯಲಿ ಎಂಬ ಮಹದುದ್ದೇಶದೊದಿಗೆ ನಡೆಸಿದ ಈ ಕಾರ್ಯಕ್ರಮವನ್ನು ಮಜೀದ್ ಉಸ್ತಾದ್ ರವರು ದುಆ ದ ನಂತರ  ಸ್ವಾಗತ ಭಾಷಣ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೂಡಿನಬಳಿಯ ಖತೀಬ್ ರಿಯಾಝ್ ಉಸ್ತಾದ್ ಮಾತನಾಡಿ ಇಂತಹ ಕಾರ್ಯಗಳಿಂದ ಜಗದೊಡೆಯ  ನಮ್ಮೆಲ್ಲರನ್ನು ಇಷ್ಟಪಡುವಂತಾಗಲಿ,  ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸಮಾಜಮುಖಿಯಾಗಿ ಸಮಾಜ ಸೇವೆಯ ಸುಲ್ತಾನರಾಗಿ ಮೆರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಸಭೆಯ ಅಧ್ಯಕ್ಷ ಸ್ಥಾನ ವಹಿಸಿದ್ದ ವಹಾಬ್ ಅವರ ನೇತೃತ್ವದಲ್ಲಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ಪ್ರೊಫೈಲ್ ಬಿಡುಗಡೆ ಮಾಡಲಾಯಿತು.

ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ಸಂಚಾಲಕ  ಅಶ್ರಫ್ ಶಿರ್ವ ಕಾರ್ಯಕ್ರಮ ನಿರೂಪಿಸಿದರು.

ಈ ಸಂಧರ್ಭದಲ್ಲಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ಸ್ಥಾಪಕಾಧ್ಯಕ್ಷ  ರಶೀದ್ ರಾಶ್ ಬ್ಯಾರಿ, ವಲಯಾಧ್ಯಕ್ಷ  ಇಮ್ತಿಯಾಝ್ ಉಡುಪಿ, ಕಾರ್ಯದರ್ಶಿಗಳಾದ ಮೌಲಾನ ರಝ್ವಿ ಉಸ್ತಾದ್, ಮಜೀದ್ ಉಸ್ತಾದ್, ಹಾಗೂ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ಎಲ್ಲಾ ಸಹ ಪ್ರವರ್ತಕರೂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News