ಅದಾನಿ ಯುಪಿಸಿಎಲ್‌ನಿಂದ ಉಚಿತ ಶಿಕ್ಷಣ ಪರಿಕರಗಳ ವಿತರಣೆ

Update: 2017-07-22 17:51 GMT

ಪಡುಬಿದ್ರೆ, ಜು. 22: ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯು ಅದಾನಿ ಫೌಂಡೇಶನ್ ಸಂಸ್ಥೆಯ ಸಹಯೋಗದೊಂದಿಗೆ ವಿವಿಧ ಶಾಲೆಗಳಿಗೆ ಒಟ್ಟು  1210 ಮಕ್ಕಳಿಗೆ 10.89  ಲಕ್ಷ ರೂ. ಮೌಲ್ಯದ ಉಚಿತ ಶಿಕ್ಷಣ ಪರಿಕರಣಗಳನ್ನು ಶನಿವಾರ ವಿತರಿಸಲಾಯಿತು.

ಉಡುಪಿ ಜಿಲ್ಲೆಯ ಪಲಿಮಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಲಿಮಾರು ಸರಕಾರಿ ಪ್ರೌಢ ಶಾಲೆ, ಇನ್ನ ಕುರ್ಕಿಲಬೆಟ್ಟು ಹಿರಿಯ ಪ್ರಾಥಮಿಕ ಶಾಲೆ, ಆಯುರ್ವೇದ ಭೂಷಣ ಎಮ್.ವಿ ಶಾಸ್ತ್ರಿ ಪ್ರೌಢ ಶಾಲೆ ಇನ್ನ, ಸರ್ಕಾರಿ ಪ್ರೌಢ ಶಾಲೆ ಇನ್ನ, ಉರ್ದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಲಿಮಾರು, ಕರ್ನಿರೆ ಹಿರಿಯ ಪ್ರಾಥಮಿಕ ಶಾಲೆ ಬಳ್ಕುಂಜೆ, ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲೆ ಬಳ್ಕುಂಜೆ, ಸಂತ ಪೌಲರ ಪ್ರೌಢ ಶಾಲೆ ಬಳ್ಕುಂಜೆ ಶಾಲೆಯ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಪರಿಕರಣಗಳನ್ನು ತನ್ನ ಸಿ.ಎಸ್.ಆರ್ ಯೋಜನೆಯ ಶೈಕ್ಷಣಿಕ ಕಾರ್ಯಕ್ರಮದಡಿಯಲ್ಲಿ ವಿತರಿಸಲಾಯಿತು.

ಪರಿಕರಣಗಳಲ್ಲಿ ನೋಟ್ ಪುಸ್ತಕಗಳು, ಬ್ಯಾಗ್, ಕಂಪಾಸ್ ಬಾಕ್ಸ್ ಹಾಗೂ ಕೊಡೆ ಒಳಗೊಂಡಿದೆ. ಶಾಲಾ ಪರಿಕರಣಗಳನ್ನು ಯುಪಿಸಿಎಲ್ ಕಂಪೆನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ವಿತರಿಸಿದರು. ಪಲಿಮಾರು ಪಂಚಾಯತ್ ವಲಯದ ಶಾಲೆಗಳ ಶಾಲಾ ಪರಿಕರಣ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿತೇಂದ್ರ ಫುಟಾರ್ಡೊ ವಹಿಸಿದ್ದರು.

ಸಮಾರಂಭದಲ್ಲಿ ಯುಪಿಸಿಎಲ್ ನ ಎಜಿಎಮ್ ಗಿರೀಶ್ ನಾವಡ, ಪ್ರಬಂಧಕರಾದ ರವಿ ಜೀರೆ ಹಾಗೂ ಅದಾನಿ ಫೌಂಡೇಶನ್ ನ ಸುಕೇಶ್ ಸುವರ್ಣ, ವಿನೀತ್ ಅಂಚನ್ ಹಾಗೂ ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News