×
Ad

ಮೂಡುಬಿದಿರೆ: ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ

Update: 2017-07-23 13:30 IST

ಮೂಡುಬಿದಿರೆ, ಜು. 23: ಕರ್ನಾಟಕ ರಾಜ್ಯ ಪೊಲೀಸ್ ಕಾನ್‌ಸ್ಟೇಬಲ್(ಸಿವಿಲ್) ಲಿಖಿತ ಪರೀಕ್ಷೆಯನ್ನು ವಿದ್ಯಾಗಿರಿಯ ವಿವೇಕಾನಂದ ನಗರದಲ್ಲಿರುವ ಆಳ್ವಾಸ್ ಪ್ರೌಢಶಾಲಾ ಕ್ಯಾಂಪಸ್‌ನಲ್ಲಿ ರವಿವಾರ ಆಯೋಜಿಸಲಾಗಿತ್ತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ 5,705 ಮಂದಿ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್, ಕ್ರೈಂ ಹಾಗೂ ಸಂಚಾರಿ ವಿಭಾಗದ ಡಿಸಿಪಿ ಹನುಮಂತರಾಯ, ಎಸಿಪಿ ರಾಜೆಂದ್ರ ಡಿ.ಎಸ್, ಮೂಡುಬಿದಿರೆ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್, ಎಸ್‌ಐ ದೇಜಪ್ಪ ಸಹಿತ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನಲ್ಲಿ ಪೊಲೀಸ್ ಸಿಬ್ಬಂದಿ ಹಗೂ ಆಳ್ವಾಸ್‌ನ ಸಿಬ್ಬಂದಿ ಪರೀಕ್ಷೆ ವ್ಯವಸ್ಥಿತ ಹಾಗೂ ಶಿಸ್ತುಬದ್ಧವಾಗಿ ನಡೆಯಲು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News