ಆಳ್ವಾಸ್‌ನಲ್ಲಿ ಆಟಿ ಕಷಾಯ ವಿತರಣೆ
ಮೂಡುಬಿದಿರೆ, ಜು. 23: ಆಳ್ವಾಸ್ ಸಂಜೀವಿನಿ 2017 ಕಾರ್ಯಕ್ರಮದಡಿಯಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಆಟಿ ಕಷಾಯ ವಿತರಣಾ ಕಾರ್ಯಕ್ರಮವು ರವಿವಾರ ವಿದ್ಯಾಗಿರಿಯಲ್ಲಿ ನಡೆಯಿತು.
ಮೂಡುಬಿದಿರೆಯ ಹಿರಿಯ ವಕೀಲ ಚೇತನ್ ವರ್ಮ, ವಿದ್ಯಾರ್ಥಿಗಳಿಗೆ ಆಟಿ ಕಷಾಯ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ ಪದ್ಯಾಣ ಆಟಿ ಕಷಾಯದ ಮಹತ್ವದ ಬಗ್ಗೆ ತಿಳಿಸಿದರು. ತುಳುನಾಡಿನ ಆಹಾರ ಪದ್ಧತಿ, ಪಾರಂಪರಿಕ ಔಷಧಿಗಳಲ್ಲಿ ರೋಗ ನಿರೋಧಕ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆಟಿ ಆಚರಣೆ, ಆಟಿ ಕಷಾಯ ಸೇವನೆ ಸಹಿತ ತುಳುನಾಡಿನ ಆಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ ಎಂದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಡಾ. ಪ್ರಶಾಂತ್ ಬಿ.ಕೆ, ಡಾ.ಸೌಮ್ಯ, ಡಾ. ನಯನಾ, ಶಿಕ್ಷಕ ರಾಮಕೃಷ್ಣ ಶಿರೂರು, ಬಾಲಕೃಷ್ಣ ಶೆಟ್ಟಿ, ಪ್ರಮೋದ್ ಉಪಸ್ಥಿತರಿದ್ದರು.