×
Ad

ಪಿ.ಎಫ್.ಐ ವತಿಯಿಂದ ಈದ್ ಮಿಲನ್ ಕ್ರೀಡಾಕೂಟ

Update: 2017-07-23 16:05 IST

ಫರಂಗಿಪೇಟೆ, ಜೂ. 23: ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಬಿ.ಸಿ.ರೋಡ್ ವಲಯ ವತಿಯಿಂದ ಫರಂಗಿಪೇಟೆಯಲ್ಲಿ ಈದ್ ಮಿಲನ್ ಕ್ರೀಡಾಕೂಟ ನಡೆಯಿತು.

ಪಿ.ಎಫ್.ಐ ಬಿ.ಸಿ.ರೋಡ್ ವಲಯಾಧ್ಯಕ್ಷ ಇಮ್ತಿಯಾಝ್ ತುಂಬೆ ಮಾತನಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಯೂ ಬಹು ಮುಖ್ಯ ಪಾತ್ರ ವಹಿಸುತ್ತದೆ. ಸಮಾಜವನ್ನು ಪರಿವರ್ತನೆಗೆ ಪ್ರಯತ್ನ ಮಾಡುವ ಆಲೋಚನೆ ಇದ್ದರೆ ದೈಹಿಕ,  ಮಾನಸಿಕವಾಗಿ ತರಬೇತು ಅಗತ್ಯವಾಗಿರುತ್ತದೆ, ಆರೋಗ್ಯವಂತ ಜನರಿಂದ ಸದ್ರಢ, ಸ್ಥಿತಿವಂತ, ಆರೋಗ್ಯವಂತ ಸಮಾಜದ ನಿರ್ಮಾಣ ಮಾಡಲು ಸಹಕಾರಿಯಾಗಬಹುದು ಎಂದು ಹೇಳಿದರು, 

ಪಿ.ಎಫ್.ಐ ಬಿ.ಸಿ.ರೋಡ್ ವಲಯ ದೈಹಿಕ ತರಬೇತುದಾರರಾದ ಇಸ್ಮಾಯಿಲ್, ಪಿ.ಎಫ್.ಐ ಬಿ.ಸಿ.ರೋಡ್ ವಲಯ ಕಾರ್ಯದರ್ಶಿ ಶಬೀರ್, ಎಸ್.ಡಿ.ಪಿ.ಐ ಪುದು ವಲಯಾದ್ಯಕ್ಷ ಸುಲೈಮಾನ್, ಪಿ.ಎಫ್.ಐ ಫರಂಗಿಪೇಟೆ ವಲಯ ಅದ್ಯಕ್ಷ ನಝೀರ್ ಹತ್ತನೇಮೈಲ್ ಕಲ್ಲು, ತುಂಬೆ ಅಧ್ಯಕ್ಷ  ಇರ್ಫಾನ್ ತುಂಬೆ, ಕಾರ್ಯದರ್ಶಿ ಸಿರಾಜ್ ತುಂಬೆ, ಪರ್ಲಿಯಾ ವಲಯ ಕಾರ್ಯದರ್ಶಿ ರಹೀಮ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News