ಪಕ್ಷದ ಪುನಶ್ಚೇತನಕ್ಕಾಗಿ ಸ್ವತಃ ಪ್ರಚಾರಕ್ಕಿಳಿದ ಮಾಯಾವತಿ
ಲಕ್ನೊ,ಜು. 23: ರಾಜ್ಯಸಭೆಗೆ ರಾಜೀನಾಮೆ ನೀಡಿದ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಬಿಎಸ್ಪಿಗಾಗಿ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಸೋಲನುಭವಿಸಿತ್ತು. ರಾಜ್ಯಸಭೆಗೆ ರಾಜೀನಾಮೆ ಘೋಷಿಸುವ ಮೂಲಕ ಪಾರ್ಟಿಗೆ ಹೊಸಜೀವ ತಂದು ಕೊಡಲು ಮಾಯಾವತಿ ಶ್ರಮಿಸುತ್ತಿದ್ದಾರೆ. ಇದಕ್ಕೆಂದೇ ಲಕ್ನೊದಲ್ಲಿ ಬಿಎಸ್ಪಿ ನಾಯಕರು ಮತ್ತು ಜನಪ್ರತಿನಿಧಿಗಳ ಸಭೆಯನ್ನು ಕರೆದಿದ್ದರು. ಅವರೊಡನೆ ತಾನು ರಾಜಿನಾಮೆ ನೀಡಬೇಕಾಗಿ ಬಂದ ಕಾರಣಗಳನ್ನು ವಿವರಿಸಿದ್ದಾರೆ. ರಾಜೀನಾಮೆಯ ನೀಡಿದಬಳಿಕ ನಡೆದ ವಿದ್ಯಮಾನಗಳನ್ನು ಮಾಯಾವತಿ ಸಭೆಯಲ್ಲಿ ಚರ್ಚಿಸಿದ್ದಾರೆ. ಜನರ ಬೆಂಬಲವನ್ನುಮರಳಿ ಗಳಿಸಲಿಕ್ಕಾಗಿ ರ್ಯಾಲಿ,ಸಭೆಯಗಳನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯಸಭೆಯಲ್ಲಿ ದಲಿತರ ಕಳೆದ ವಿಧಾನ ಸಭಾ ಚುಣಾವಣೆಲ್ಲಿ ವಿರುದ್ಧ ನಡೆದ ದಾಳಿಗಳ ಕುರಿತು ಪ್ರಸ್ತಾಪಿಸಲು ಮುಂದಾದಾಗ ಮಾಯಾವತಿಯವರಿಗೆ ರಾಜಸಭಾ ಉಪಾಧ್ಯಕ್ಷ ಪಿ.ಜೆ.ಕುರಿಯನ್ ಅವಕಾಶ ನೀಡಿರಲಿಲ್ಲ.ಇದನ್ನು ಪ್ರತಿಭಟಿಸಿ ಮಾಯಾವತಿ ರಾಜೀನಾಮೆ ನೀಡಿದ್ದಾರೆ.