ಆ.13: ಪಿಲಿಕುಳ ಆಟಿ ಕೂಟ
Update: 2017-07-23 17:15 IST
ಮಂಗಳೂರು, ಜು.23: ಪಿಲಿಕುಳದ ಗುತ್ತು ಮನೆಯಲ್ಲಿ ವಿಜಯ ಬ್ಯಾಂಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲ್ಕೂರ ಪ್ರತಿಷ್ಟಾನ ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಹಯೋಗದೊಂದಿಗೆ ಆ.13ರಂದು ಬೆಳಗ್ಗೆ 10ಕ್ಕೆ ಪಿಲಿಕುಳ ಆಟಿಕೂಟವನ್ನು ಜಾನಪದ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.