ವಿದ್ಯುತ್ ತಂತಿ ತಗುಲಿ ದನ ಸಾವು
Update: 2017-07-23 18:20 IST
ಮೂಡುಬಿದಿರೆ, ಜು.23: ವಿದ್ಯುತ್ ತಂತಿ ತಗುಲಿ ದನವೊಂದು ಸಾವನ್ನಪ್ಪಿದ ಘಟನೆ ಪಾಲಡ್ಕ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಂದಲೆ ಗ್ರಾಮದ ಪಲ್ಕೆ ಎಂಬಲ್ಲಿ ಭಾನುವಾರ ಸಾಯಂಕಾಲ ಸಂಭವಿಸಿದೆ. ವಿದ್ಯುತ್ ತಂತಿ ಕಡಿದು ಬಿದ್ದಿದ್ದು, ಈ ದುರ್ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಕಡಂದಲೆ ಪಲ್ಕೆ ಅಂಗಡಿಗುತ್ತು ಪ್ರದೇಶದ ನಾರಾಯಣ ಮಡಿವಾಳ ಎಂಬವರಿಗೆ ಸೇರಿದ ದನವನ್ನು ಗದ್ದೆಯಲ್ಲಿ ಮೇಯಲು ಕಟ್ಟಲಾಗಿತ್ತು. ಸ್ಥಳಕ್ಕೆ ಮೂಡುಬಿದಿರೆ ಮೆಸ್ಕಾಂ ಶಾಖಾಧಿಕಾರಿ ಪ್ರಕಾಶ್ ಭೇಟಿ ಪರಿಶೀಲಿಸಿದರು.