ಯೋಧ ರಾಧೇಶ್ ಗೌಡರಿಗೆ ಅಭಿನಂದನೆ
Update: 2017-07-23 18:49 IST
ಪುತ್ತೂರು, ಜು.23: ಭೂಸೇನೆಯಲ್ಲಿ ಪದೋನ್ನತಿ ಹೊಂದಿ ಕಾರ್ಗಿಲ್ ಸೇನಾ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್‌ನ ಹಿರಿಯ ವಿದ್ಯಾರ್ಥಿ ಕ್ಯಾ. ರಾಧೇಶ್ ಗೌಡರಿಗೆ ಕಾಲೇಜು ವಿದ್ಯಾರ್ಥಿಗಳ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕಿ ಹರಿಣಿ ಪುತ್ತೂರಾಯ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಭಗತ್, ಕಾರ್ಯದರ್ಶಿ ಪಂಕಜ್, ಎಬಿವಿಪಿ ಸದಸ್ಯರಾದ ಹೃಷಿಕೇಶ್, ಯತೀಂದ್ರ, ವಿನುತ್, ಸುರಕ್ಷಿತ್, ರೇವಂತ್, ಶಿವಪ್ರಸಾದ್, ಹವೀನ್, ಕೌಶಿಕ್, ಜೀವನ್, ನಗರಸಭಾ ಸದಸ್ಯ ರಾಜೇಶ್ ಬನ್ನೂರು, ರಾಧೇಶ್ ತಂದೆ ನಿವೃತ್ತ ಯೋಧ ರಾಧಾಕೃಷ್ಣ ಗೌಡ, ತಾಯಿ ಉಷಾ ಗೌಡ, ಚಿಕ್ಕಪ್ಪ ರಾಮದಾಸ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಭಾರತೀಯ ಭೂಸೇನೆಯಲ್ಲಿ 18ನೇ ಗ್ರೆನೇಡಿಯಾರ್ ಬೆಟಾಲಿಯನ್‌ಗೆ ಲೆಪ್ಟಿನೆಂಟ್ ಆಗಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಿ, ಇದೀಗ ಪದೋನ್ನತಿ ಹೊಂದಿ ಕಾರ್ಗಿಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.