×
Ad

"ಶೌಚಾಲಯ ಕಟ್ಟಿಸಲು ಸಾಧ್ಯವಾಗದಿದ್ದರೆ ಪತ್ನಿಯನ್ನು ಮಾರಿ"

Update: 2017-07-23 19:30 IST

ಔರಂಗಬಾದ್, ಜು.23: ಪತ್ನಿಗಾಗಿ ಶೌಚಾಲಯಗಳನ್ನು ಕಟ್ಟಲು ಸಾಧ್ಯವಾಗದವರು ಪತ್ನಿಯನ್ನು ಮಾರಿ ಎಂದಿರುವ ಔರಂಗಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕನ್ವಾಲ್ ತನುಜ್ ಇದೀಗ ವಿವಾದದಲ್ಲಿ ಸಿಲುಕಿದ್ದಾರೆ.

ಜಿಲ್ಲೆಯ ಜಮ್ಹೋರ್ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಶೌಚಾಲಯದ ಕೊರತೆಯಿಂದ ಮಹಿಳೆಯರ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ನಡೆಯುತ್ತಿವೆ. ಶೌಚಾಲಯ ನಿರ್ಮಾಣಕ್ಕೆ ಕೇವಲ 12 ಸಾವಿರ ರೂ. ವೆಚ್ಚವಾಗುತ್ತದೆ. ಪತ್ನಿಯ ಘನತೆಗಿಂತ 12  ಸಾವಿರ ರೂ. ಹೆಚ್ಚೇ?, 12 ಸಾವಿರಕ್ಕೆ ಬದಲಾಗಿ ತಮ್ಮ ಪತ್ನಿ ಅತ್ಯಾಚಾರಕ್ಕೊಳಗಾಗಲು ಯಾರು ಬಿಡುತ್ತೀರಿ” ಎಂದು ಪ್ರಶ್ನಿಸಿದ್ದಾರೆ.

“ನಿಮ್ಮ ಮನಸ್ಥಿತಿ ಇದೇ ಆಗಿದ್ದರೆ ಪತ್ನಿಯನ್ನು ಮಾರಿಬಿಡಿ. ಯಾರಿಗೆ ಶೌಚಾಲಯ ನಿರ್ಮಿಸಲು ಸಾಧ್ಯವಿಲ್ಲವೋ ಅಂತಹವರು ಪತ್ನಿಯನ್ನು ಮಾರಬೇಕು ಅಥವಾ ಹರಾಜು ಹಾಕಬೇಕು” ಎಂದು ಕನ್ವಾಲ್ ತನುಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News