ಕೊರಗ ಕುಟುಂಬಗಳ ಮನೆಗೆ ಕಂದಾಯ ಇಲಾಖೆಯ ಅಧಿಕಾರಿಗಳ ಭೇಟಿ
Update: 2017-07-23 19:39 IST
ಬೆಳ್ತಂಗಡಿ,ಜು.23: ಕಲ್ಮಂಜ ಗ್ರಾಮದ ಪಜಿರಡ್ಕದಲ್ಲಿ ಪ್ಲಾಸ್ಟಿಕ್ ಡೇರೆಗಳಲ್ಲಿ ಬದುಕನ್ನು ನಡೆಸುತ್ತಿರುವ ಕೊರಗ ಕುಟುಂಬಗಳ ಮನೆಗೆ ಇಂದು ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳ್ತಂಗಡಿ ಕಂದಾಯ ನಿರೀಕ್ಷಕ ರವಿಕುಮಾರ್ ಗ್ರಾಮಕರಣಿಕ ರಾಘವೇಂದ್ರ ಬಿ.ಎಸ್ ಅವರು ಸ್ಥಳಕ್ಕೆ ಬೇಟಿ ನೀಡಿದರು ಹಾಗು ಕೊರಗ ಹಾಗೂ ಇತರ ದಲಿತ ಕುಟುಂಬಗಳ ಸಮಸ್ಯೆ ಪರಿಶೀಲಿಸಿದರು, ಇಲ್ಲಿನ ಐದು ಕುಟುಂಬಗಳಿಗೆ ಮನೆ ನಿವೇಶನಗಳನ್ನು ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗೂ ಇವರಿಗೆ ಪಡಿತರಚೀಟಿ ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವ ಬಗ್ಗೆಯೂ ಕಂದಾಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಮನೆ ನಿವೇಶನ ದೊರೆತರೆ ಈ ಕುಟುಂಬಗಳಿಗೆ ಸರಕಾರದಿಂದ ಮನೆ ನಿರ್ಮಿಸಲು ತಲಾ ಎರಡು ಲಕ್ಷ ರೂ ಅನುದಾನವೂ ದೊರಕಲಿದೆ.
ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ದಲಿತ ಹಕ್ಕುಗಳ ಸಮನ್ವಯಸಮಿತಿಯ ರಾಜ್ಯ ಸಮಿತಿ ಸದಸ್ಯ ಶೇಖರ ಎಲ್ ಇದ್ದರು.