ಪಾನೀರು : ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Update: 2017-07-23 19:47 IST
ಮಂಗಳೂರು, ಜು. 23: ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಪಾನೀರು ಘಟಕದ ವತಿಯಿಂದ ರವಿವಾರ ಪಾನೀರು ದಯಾಮಾತೆ ಚರ್ಚ್ ವಠಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚ್ ಧರ್ಮಗುರು ಫಾ.ಡೆನಿಸ್ ಸುವಾರಿಸ್ ವಹಿಸಿದ್ದರು. ಕೆಥೋಲಿಕ್ ಸಭಾ ಅಧ್ಯಕ್ಷರಾದ ಆಲ್ವಿನ್ ಡಿಸೋಜ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನಿಸ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ಉರ್ಬಾನ್ ಫೆರಾವೋ, ಪ್ರತಿಭಾ ಪುರಸ್ಕಾರ ಸಮಿತಿ ಸಂಚಾಲಕ ಫಿಲಿಪ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಸರಿಟಾ ಡಿಸೋಜ ಕಾರ್ಯಕ್ರಮ ನಿರ್ವಸಿದರು. ಕೆಥೋಲಿಕ್ ಸಭಾ ಕಾರ್ಯದರ್ಶಿ ರೇಷ್ಮಾ ಸಂತ ಸೇಟ್ ವಂದಿಸಿದರು.