×
Ad

ಮದ್ರಸ ಪುಸ್ತಕ ಬದಲಾವಣೆ ವಿರುದ್ಧ ಪ್ರತಿಭಟನೆ

Update: 2017-07-23 20:07 IST

ಮಂಗಳೂರು, ಜು. 23: ಖಾಝಿಯವರ ಹಾಗೂ ಹಿರಿಯರ ಅಭಿಪ್ರಾಯವನ್ನು ಕೇಳದೆ ಏಕಾಏಕಿ ಮದ್ರಸ ಪುಸ್ತಕವನ್ನು ಬದಲಾಯಿಸಿರುವ ದರ್ಗಾ ಸಮಿತಿಯ ಸದಸ್ಯರ ಕ್ರಮ ಖಂಡನೀಯ ಎಂದು ಹಳೇಕೋಟೆ ಮಸೀದಿಯ ಮಾಜಿ ಅಧ್ಯಕ್ಷ ಮೆಹಮೂದ್ ಹೇಳಿದ್ದಾರೆ.

ಮದರಸದಲ್ಲಿ ಹೊಸಪಠ್ಯ ಪುಸ್ತಕವನ್ನು ವಿರೋಧಿಸಿ ಹಳೇಕೋಟೆ ಮೊಹಲ್ಲಾ ವ್ಯಾಪ್ತಿಯ ಮಕ್ಕಳು ಹಾಗೂ ಹೆತ್ತವರು ಶನಿವಾರ ರಾತ್ರಿ ಹಳೇಕೋಟೆಯ ಮರ್ಕಲ್ ಇಸ್ಲಾಂ ಮದ್ರಸ ಎದುರುಗಡೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ಗೊಂದಲದಲ್ಲಿ ಸಿಲುಕಿಸುವುದು ಸರಿಯಲ್ಲ. ಕಳೆದ ಏಳು ದಿನಗಳಿಂದ ಹಳೇಕೋಟೆಯಲ್ಲಿ ಹೊಸ ಪಠ್ಯಪುಸ್ತಕವನ್ನು ವಿರೋಧಿಸುತ್ತಿದ್ದೇವೆ. ಈವರೆಗೂ ದರ್ಗಾ ಅಧ್ಯಕ್ಷರಾಗಲಿ, ಜವಾಬ್ದಾರಿ ಸ್ಥಾನದಲ್ಲಿರುವವರಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಮೆಹಮೂದ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News