×
Ad

ವಿವಾದಿತ ದಕ್ಷಿಣ ಚೀನಾ ಸಮುದ್ರ ದ್ವೀಪದಲ್ಲಿ ಸಿನೆಮಾ ಥಿಯೇಟರ್ ಆರಂಭಿಸಿದ ಚೀನಾ

Update: 2017-07-23 20:30 IST

ಬೀಜಿಂಗ್,ಜು.23: ವಿವಾದಿತ ದಕ್ಷಿಣ ಚೀನಾ ಸಮುದ್ರದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸುವ ಪ್ರಯತ್ನವಾಗಿ ಚೀನಾವು ಅಲ್ಲಿನ ದ್ವೀಪವೊಂದರಲ್ಲಿ ಚಿತ್ರಮಂದಿರವೊಂದನ್ನು ಆರಂಭಿಸಿದೆಯೆಂದು ಸರಕಾರಿ ಮಾಧ್ಯಮವೊಂದು ರವಿವಾರ ವರದಿ ಮಾಡಿದೆ.

   ದಕ್ಷಿಣ ಚೀನಾ ಸಮುದ್ರದ ದ್ವೀಪವೊಂದರಲ್ಲಿರುವ ಚೀನಾದ ನೂತನ ನಗರ ಸಾಂಶಾದಲ್ಲಿ ಶನಿವಾರ ಆರಂಭಗೊಂಡ ನೂತನ ಸಿನೆಮಾ ಥಿಯೇಟರ್‌ನಲ್ಲಿ ಸುಮಾರು 200 ಮಂದಿ ನಿವಾಸಿಗಳು ಹಾಗೂ ಸೈನಿಕರು, ‘ ದಿ ಎಟರ್ನಿಟಿ ಆಫ್ ಜಿಯಾವೊ ಯುಲು ’ ಎಂಬ ಚೀನಿ ಚಿತ್ರವನ್ನು ವೀಕ್ಷಿಸಿದರೆಂದು ಅಧಿಕೃತ ಮೂಲಗಳು ತಿಳಿಸಿವೆ.

  ‘‘ಈ ಚಿತ್ರಮಂದಿರದಲ್ಲಿ ಪ್ರತಿ ದಿನವೂ ಕನಿಷ್ಠ ಒಂದು ಚಿತ್ರವನ್ನು ಪ್ರದರ್ಶಿಸಲಾಗುವುದು. ಹೀಗಾಗಿ ಯಾಂಗ್‌ಕ್ಸಿಂಗ್ ದ್ವೀಪದಲ್ಲಿರುವ ನಿವಾಸಿಗಳು ಹಾಗೂ ಯೋಧರು, ದೇಶಾದ್ಯಂತ ಇತರ ಸಿನಿಪ್ರಿಯರ ಜೊತೆಗೆ ಏಕಕಕಾಲದಲ್ಲಿ ಸಿನೆಮಾಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ’’ ಎಂದು ಹೈನಾನ್ ಮಾಧ್ಯಮ ಸಮೂಹದ ಜನರಲ್ ಮ್ಯಾನೇಜರ್ ಗು ಕ್ಸಿಯಾವೊಜಿಂಗ್ ತಿಳಿಸಿದ್ದಾರೆ.

  ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ತನ್ನ ಪ್ರಜೆಗಳು ನೆಲೆಸುವುದನ್ನು ಪ್ರೋತ್ಸಾಹಿಸುವುದಕ್ಕಾಗಿ ಚೀನಾವು ತನ್ನ ನಿಯಂತ್ರಣದಲ್ಲಿರುವ ದ್ವೀಪಗಳಲ್ಲಿ ಸೌಲಭ್ಯಗಳನ್ನು ವಿಸ್ತರಿಸುತ್ತದೆ. ಇದರ ಜೊತೆಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ಕೂಡಾ ಅದು ನಿರ್ಮಿಸುತ್ತಿದ್ದು ಅಲ್ಲಿ ಸೆರೆಮನೆ ಹಾಗೂ ವಿಮಾನನಿಲ್ದಾಣಗಳನ್ನು ಕೂಡಾ ಸ್ಥಾಪಿಸುವ ಕಾರ್ಯದಲ್ಲಿ ತೊಡಗಿದೆ.

ಕಳೆದ ಎಪ್ರಿಲ್‌ನಲ್ಲಿ ಸಾಂಶಾ ಪಟ್ಟಣದಲ್ಲಿ ಪ್ರಪ್ರಥಮ ಸಾರ್ವಜನಿಕ ಗ್ರಂಥಾಲಯ ವನ್ನು ತೆರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News