ಜಾಫ್ನಾ: ತಮಿಳು ನ್ಯಾಯಾಧೀಶರ ಹತ್ಯೆಗೆ ವಿಫಲ ಯತ್ನ
ಕೊಲಂಬೊ,ಜು.22: ಶ್ರೀಲಂಕಾದ ಪ್ರಮುಖ ತಮಿಳು ನ್ಯಾಯಾಧೀಶ ಮಾಣಿಕವ ಸಾಗರ್ ಇಳಂಚೆಳಿಯನ್ ಅವರು ಶನಿವಾರ ಜಾಫ್ನಾ ನಗರದಲ್ಲಿ ಹತ್ಯಾ ಯತ್ನವೊಂದರಿಂದ ಪಾರಾಗಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ, ಇಳಂಚೆಳಿಯನ್ ಅವರ ಭದ್ರತಾ ಅಧಿಕಾರಿಯ ಪಿಸ್ತೂಲ್ ಸೆಳೆದು, ಗುಂಡು ಹಾರಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಗುಂಡು ಗುರಿತಪ್ಪಿದ್ದರಿಂದ ಇಳಂಚೆಳಿಯನ್ ಪಾರಾಗಿದ್ದಾರೆಂದು ಅವರು ಹೇಳಿದ್ದಾರೆ.
ನ್ಯಾಯಮೂರ್ತಿ ಇಳಂಚೆಳಿಯನ್ ಅವರ ಕಾರು ಜಾಫ್ನಾದ ನಲ್ಲೂರ್ ಜಂಕ್ಷನ್‌ನಲ್ಲಿ ವಾಹನದಟ್ಟಣೆ ನಡುವೆ ಸಿಕ್ಕಿಹಾಕಿಕೊಂಡಿದ್ದಾಗ, ಈ ಶೂಟೌಟ್‌ನಡೆದಿದೆಯೆನ್ನಲಾಗಿದೆ. ಘಟನೆಯಲ್ಲಿ ಇಳಂಚೆಳಿಯನ್ ಪಾರಾಗಿದ್ದು ಅವರ ಅಂಗರಕ್ಷಕನಿಗೆ ಗಾಯಗಳಾಗಿವೆ.
ನ್ಯಾಯಮೂರ್ತಿ ಇಳಂಚೆಳಿಯನ್ ಅವರು 2015ರ ಮೇನಲ್ಲಿ ಶಿವಲೋಗನಾಥನ್ ವಿದ್ಯಾ, ಎಂಬ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿಚಾರಣೆಯ ನೇತೃತ್ವ ವಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಉಪ ಪೊಲೀಸ್ ನಿರೀಕ್ಷರೊಬ್ಬರನ್ನು ಇತ್ತೀಚೆಗೆ ಬಂಧಿಸಲಾಗಿತ್ತು.