×
Ad

ಮಾಡೂರು ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಆಟಿಡೊಂಜಿ ಕೂಟ

Update: 2017-07-23 20:59 IST

ಉಳ್ಳಾಲ, ಜು. 23: ಕೋಟೆಕಾರು ಮಾಡೂರಿನ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ರವಿವಾರಎರಡನೇ ವರುಷದ ಆಟಿಡೊಂಜಿ ಕೂಟ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕೃಪಾ ಧರ್ಮಜಾಗೃತಿ ಬಳಗದ ಸಂಚಾಲಕ ಕೃಷ್ಣ ಕುಂಜತ್ತೂರು, ನಾವಿಂದು ಆಹಾರ, ಬಟ್ಟೆ, ಜೀವನ ಪದ್ಧತಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡಿದ್ದೇವೆ. ಇದು ನಮ್ಮ ಮೇಲೆ ಯಾವ ರೀತಿಯಲ್ಲಿ ಪರಿಣಾಮಗಳು ಬೀರುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ, ಆಷಾಢ ತಿಂಗಳಿನಲ್ಲಿ ತುಳುವರು ಸೇವಿಸುತ್ತಿದ್ದ ಆಹಾರಗಳೇ ವಿಶಿಷ್ಟ ಮತ್ತು ವೈದ್ಯಕೀಯ ಸತ್ವಗಳನ್ನು ಒಳಗೊಂಡಿದ್ದವು. ಇಂತಹ ಶ್ರೇಷ್ಠ ಸಂಸ್ಕೃತಿಯನ್ನು ನೆನಪಿಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಗ್ರಾಮದ ಹಿರಿಯರಾದ ಇಂದಿರಾವತಿ ಕೊಂಡಾಣ, ರಾಧಾ ಸೋಮಪ್ಪ, ವೇದಾವತಿ ಭೀರ್ಮಣ್ಣ ಪೂಜಾರಿ, ಗೌರಿ ನಾರಾಯಣ, ಲೋಕಯ್ಯ, ಪದ್ಮನಾಭ ಬೆರಿಕೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಾರ್ವಜನಿಕರು ಮತ್ತು ಮಕ್ಕಳಿಗೆ ಆಟೋಟ ಸ್ಫರ್ಧೆ ಹಾಗೂ ಆಷಾಢ ತಿಂಗಳ ವಿಶೇಷ ಖಾದ್ಯಗಳನ್ನೊಳಗೊಂಡ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ಕೆ.ಪಿ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಮಿತಿಯ ಅಧ್ಯಕ್ಷ ನವೀನ್ ಕಂಬ್ಲಕೋಡಿ, ಹಿರಿಯ ದೈವ ಪಾತ್ರಿ ದೈವ ಪಾರ್ದನಗಾರ ಕಿರಣ್ ಕುಮಾರ್ ಗಂಧಕಾಡು, ಆಡಳಿತ ಸಮಿತಿ ಸದಸ್ಯರಾದ ರವಿ ಕೊಂಡಾಣ, ಚಂದ್ರಹಾಸ್ ಪಂಡಿತ್ ಹೌಸ್, ಟ್ರಸ್ಟಿಗಳಾದ ಶೇಖರ್ ಕೊಂಡೆವೂರು, ವಿದ್ಯಾಧರ್ ಶೆಟ್ಟಿ ಪೊಸಕುರಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News