×
Ad

ಅಲ್ ಫುರ್ಖಾನ್ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

Update: 2017-07-24 17:40 IST

ಮೂಡುಬಿದಿರೆ, ಜು.24: ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ವನಮಹೋತ್ಸವವನ್ನು ಆಚರಿಸಲಾಯಿತು. ಅಲ್ ಫುರ್ಖಾನ್ ಸಂಸ್ಥೆಯ ಟ್ರಸ್ಟಿ ಮಹಮ್ಮದ್ ಅಶ್ಫಾಕ್ ಅವರಿಗೆ ಗಿಡವನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು.

ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪ ವಲಯ ಅರಣ್ಯ ಅಧಿಕಾರಿ ಪ್ರಕಾಶ್ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರತೀ ವರ್ಷ ಗಿಡ ನೆಡುವ ಮೂಲಕ ಪರಿಸರವನ್ನು ಸಂರಕ್ಷಿಸಿರೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅರೆಬಿಕ್ ವಿಭಾಗದ ಅಧ್ಯಾಪಕ ಅಬ್ದುಲ್ ಸಲಾಮ್ ಮಾತನಾಡಿ, ಗಿಡಗಳನ್ನು ನೆಡುವುದು ಇಸ್ಲಾಮಿನಲ್ಲಿ ಪ್ರತಿಫಲಾರ್ಹ ಎಂದರು.
ಪ್ರೌಢಶಾಲಾ ವಿದ್ಯಾರ್ಥಿಗಳ ತಂಡವು ಅಲಂಗಾರ್ ಹಾಗೂ ಕಡಲಕರೆಯ ರಸ್ತೆಯ ಇಕ್ಕೆಲಗಳಲ್ಲಿ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಜಂಟಿಯಾಗಿ ಗಿಡಗಳನ್ನು ನೆಟ್ಟರು.

ಪ್ರೌಢಶಾಲಾ ವಿದ್ಯಾರ್ಥಿನಿಯರ ತಂಡವು ಮಿಜಾರಿನ ಶೋಭಾವನಕ್ಕೆ ಭೇಟಿ ನೀಡಿ ಆಯುರ್ವೇದಿಕ್ ಗಿಡಗಳ ಬಗ್ಗೆ ಅಧ್ಯಯನ ನಡೆಸಿದರು.
ಕಿರಿಯ ವಿದ್ಯಾರ್ಥಿಗಳ ತಂಡವು ಸೋನ್ಸ್ ಫಾರ್ಮ್‌ಗೆ ಭೇಟಿ ನೀಡಿ ಫಲಪುಷ್ಪ ವೃಕ್ಷಗಳ ಪರಿಚಯ ಮಾಡಿಕೊಂಡರು.
ಉಪ ವಲಯ ಅರಣ್ಯಾಧಿಕಾರಿ ಬಸವರಾಜ್, ಅರಣ್ಯ ವೀಕ್ಷಕ ಶಿವಾನಂದ, ಅಲ್ ಫುರ್ಖಾನ್ ಸಂಸ್ಥೆಯ ಆಡಳಿತಾಧಿಕಾರಿ ಮುಹಮ್ಮದ್ ಶಹಾಂ ಹಾಗೂ ನೂರ್ ಮುಹಮ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News