ಪೆರ್ಮುದೆ: ಮನೆಗೆ ನುಗ್ಗಿ ಚಿನ್ನಾಭರಣ ಕಳವು
Update: 2017-07-24 18:17 IST
ಮಂಜೇಶ್ವರ, ಜು. 24: ಪೆರ್ಮುದೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 20 ಪವನ್ ಚಿನ್ನಾಭರಣ ಕಳವುಗೈದ ಘಟನೆ ವರದಿಯಾಗಿದೆ.
ತೊಕ್ಕೋಟಿನಲ್ಲಿ ಹೋಟೆಲ್ ನಡೆಸುತ್ತಿರುವ ಪೆರ್ಮುದೆ ಮಂಡೆಕಾಪುವಿನ ಅಬ್ದುಲ್ ರಹಿಮಾನ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಳೆದ ದಿನ ಮನೆ ಮಂದಿ ಬೀಗ ಹಾಕಿ ಮನೆಯಿಂದ ತೆರಳಿದ್ದರು. ಸಂಜೆ ವೇಳೆಗೆ ಹಿಂದಿರುಗಿದ ಸಂದರ್ಭ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಕೋಣೆಯ ಕಪಾಟಿನಲ್ಲಿರಿಸಿದ್ದ 20 ಪವನ್ ಚಿನ್ನಾಭರಣವನ್ನು ದೋಚಿದ್ದಾರೆ.
ಕುಂಬಳೆ ಪೋಲೀಸರು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.