ಮಟ್ಕಾ: ನಾಲ್ವರ ಬಂಧನ
Update: 2017-07-24 18:22 IST
ಮಂಜೇಶ್ವರ, ಜು. 24: ಕುಂಬಳೆ ಪೇಟೆಯಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಬದಿಯಡ್ಕದ ರವೀಂದ್ರನ್(38), ನಾಯ್ಕಾಪಿನ ಗಂಗನಾತ್ (40) ಎಂಬವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದು, ಇವರಿಂದ 1,430 ರೂ. ವಶಪಡಿಸಿಕೊಳ್ಳಲಾಗಿದೆ.
ಬದಿಯಡ್ಕದಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ನೆಕ್ರಾಜೆಯ ಸತೀಶನ್(30) , ಎದಿರ್ತೋಡಿನ ಹರೀಶ್(28) ಎಂಬವರನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದು ಇವರಿಂದ 760 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.