ಉಪನ್ಯಾಸಕ ಎಲಿಯಾಸ್ ಡಿಸೋಜರಿಗೆ ಸನ್ಮಾನ
ಉಳ್ಳಾಲ, ಜು.24: ಅಳೇಕಲದ ಮದನಿ ಸಂಯುಕ್ತ ಪ.ಪೂ.ಕಾಲೇಜಿನಲ್ಲಿ ಕಳೆದ 33 ವರ್ಷಗಳಿಂದ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಎಲಿಯಾಸ್ ಡಿಸೋಜರಿಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಮದನಿ ಎಜುಕೇಶನಲ್ ಎಸೋಸಿಯೇಶನ್ (ರಿ)ನ ಅಧ್ಯಕ್ಷ, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಪಂಡಿತ್ ಮುಹಮ್ಮದ್, ಮದನಿ ಹಿ.ಪ್ರಾ. ಶಾಲಾ ವಿಭಾಗದ ಸಂಚಾಲಕ ಸೈಯದ್ ತಾಹಿರ್ ತಂಙಳ್, ಕಣಚೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಜಿ ಯು.ಟಿ.ಇಕ್ಬಾಲ್ ಅಹ್ಮದ್, ಕಾಲೇಜಿನ ಪ್ರಾಂಶುಪಾಲ ಬಿ. ಮೂಸಾ ಮಾತನಾಡಿದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಹಾಜಿ ಯು. ಇಬ್ರಾಹೀಂ ಕಾಸಿಂ ಸನ್ಮಾನಿಸಿದರು. ಉಪನ್ಯಾಸಕ ಹಬೀಬ್ ರಹ್ಮಾನ್ ಸನ್ಮಾನ ಪತ್ರ ವಾಚಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಇಬ್ರಾಹೀಂ ಪಿ., ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಮೀರಾ ಜೆ., ಜೊತೆ ಕಾರ್ಯದರ್ಶಿ ಎ.ಎ.ಖಾದರ್, ಪ್ರೌಢಶಾಲೆ ಹಾಗೂ ಪಿಯು ವಿಭಾಗದ ಸಂಚಾಲಕ ಯು.ಎನ್. ಇಬ್ರಾಹೀಂ, ಕೋಶಾಧಿಕಾರಿ ಯು.ಪಿ.ಅರಬಿ, ಲೆಕ್ಕ ಪರಿಶೋಧಕ ಯು.ಎಚ್. ಹಸನಬ್ಬ, ಯು.ಎಸ್. ಉಮರ್ ಫಾರೂಕ್, ಸದಸ್ಯರಾದ ಯು.ಎ. ಇಸ್ಮಾಯೀಲ್, ಯು.ಎ.ಬಾವ, ಯು. ಎಸ್. ಅಹ್ಮದ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಟಿ. ಇಸ್ಮಾಯೀಲ್ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ಫಾಝಿಲ್ ವಂದಿಸಿದರು.