×
Ad

ಹರೇಕಳ: ಮದರಸ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ

Update: 2017-07-24 20:01 IST

ಕೊಣಾಜೆ, ಜು.24: ಪ್ರವಾದಿ (ಸ.ಅ) ರವರು ಸಣ್ಣ ಜೀವಿಗೂ ತೊಂದರೆ ನೀಡದೆ ಸದಾ ನೊಂದವರ ಸೇವೆಯಲ್ಲೇ ಜೀವನ ಕಳೆದಿದ್ದರು. ಆ ಸಂದರ್ಭ ಯಾವುದೇ ಧರ್ಮವನ್ನ ನೋಡಿರಲಿಲ್ಲ. ಅವರ ಜೀವನ ಕ್ರಮವನ್ನೇ ನಾವು ಅನುಸರಿಸಬೇಕಿದೆ ಎಂದು ಫರೀದ್‌ನಗರ ರಿಫಾಯಿ ಜುಮಾ ಮಸೀದಿಯ ಖತೀಬ್ ಸಯ್ಯಿದ್ ಸರ್ಫುದ್ದೀನ್ ಹೈದ್ರೋಸಿ ತಂಙಳ್ ಹೇಳಿದರು.

ಹರೇಕಳ ಉಲ್ಲಾಸ್‌ನಗರ ಅಲ್-ಅಮೀನ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಫರೀದ್‌ನಗರ ದಿವಂಗತ ಅಬ್ದುಲ್ ರಝಾಕ್ ಹಾಜಿ ವೇದಿಕೆಯಲ್ಲಿ ನಡೆದ ಮದರಸ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೊಟ್ಟೆಗಿಲ್ಲದವರಿಗೆ ಅನ್ನಾಹಾರ ನೀಡುವುದು ಅತಿಮುಖ್ಯ. ಆದರೆ ಇಂದು ಹೊಟ್ಟೆಗೆ ತಿನ್ನುವ ಆಹಾರವೇ ಸಮಸ್ಯೆಗೆ ಕಾರಣವಾಗುತ್ತಿದ್ದು, ಹಸಿದಿರುವವನ ಕಷ್ಟ ತಿಳಿಯುವವರ ಕೊರತೆಯಿದೆ. ಅಂತಹ ಸ್ಥಿತಿ ದೂರವಾಗಬೇಕು ಎಂದು ಹೇಳಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ರಿಫಾಯಿ ಜುಮಾ ಮಸೀದಿಯ ಸದರ್ ಮುಅಲ್ಲಿಂ ಮುಸ್ತಫಾ ಸಅದಿ ಮಾತನಾಡಿ, ಧಾರ್ಮಿಕತೆಯ ಒಂದು ಭಾಗ ಮದರಸ ಆಗಿದೆ. ಮದರಸ ಕಲಿಯುವ ಮಕ್ಕಳಿಗೆ ನೀಡಲ್ಪಡುವ ಬ್ಯಾಗ್ ಸಣ್ಣ ಕೊಡುಗೆಯಾದರೂ ಅದರಲ್ಲಿ ಸಿಗುವ ಪ್ರಯೋಜನ ದೊಡ್ಡದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News