×
Ad

ಕುತ್ಪಾಡಿ: ಆಟಿ ಅಮಾವಾಸ್ಯೆ ಆಚರಣೆ

Update: 2017-07-24 20:26 IST

ಉಡುಪಿ, ಜು.24: ಆಷಾಢ ಮಾಸದ ಆಟಿ ಅಮಾವಾಸ್ಯೆ ಪ್ರಯುಕ್ತ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ರವಿವಾರ ಪಾಲೆ ಕಷಾಯವನ್ನು ರೋಗಿಗಳು, ರೋಗಿಯ ಸಂಬಂಧಿಗಳು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಯಿತು.

ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಯು., ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಶರ್ಮ, ಆಸ್ಪತ್ರೆಯ ವ್ಯವಸ್ಥಾಪಕ ಶ್ರೀನಿವಾಸ ಹೆಗ್ಡೆ ನಿರ್ದೇಶನದಂತೆ ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ. ನಿರಂಜನ್ ರಾವ್ ಮಾರ್ಗದರ್ಶನದಲ್ಲಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಪೂಜಾ ಬಿ.ಎ. ಮತ್ತು ಡಾ .ಸಹನಾ ಕಾಮತ್ ಸಂಯೋಜಿಸಿದರು.

ಪಂಚಕರ್ಮ ವಿಭಾಗದ ಸಿಬ್ಬಂದಿ ಮೊಂತು ಡಿಸಿಲ್ವಾ ಕಷಾಯವನ್ನು ತಯಾರಿಸಿದರು. ಸುಮಾರು 300ಕ್ಕೂ ಹೆಚ್ಚು ಜನರು ಇದರ ಪ್ರಯೋಜನವನ್ನು ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News