×
Ad

ಪರ್ಕಳ: ‘ಕೆಸರದ ಗೊಬ್ಬು’ ಗ್ರಾಮೀಣ ಕ್ರೀಡಾಕೂಟ

Update: 2017-07-24 21:38 IST

ಉಡುಪಿ, ಜು.24: ಪರ್ಕಳ ಸಾರ್ವಜನಿಕ ಗಣೇಶೋತ್ಸವದ ಸುವರ್ಣ ಸಂಗಮ ಕಾರ್ಯಕ್ರಮದ ಅಂಗವಾಗಿ ಸುವರ್ಣ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಹಾಗೂ ಜೇಸಿ ಪರ್ಕಳದ ಸಹಯೋಗದಲ್ಲಿ ಪರ್ಕಳದ ರಂಗನಾಥ್ ಹೆಗ್ಡೆಯವರ ಬಾಕಿಮಾರು ಗದ್ದೆಯಲ್ಲಿ ಕೆಸರ್‌ದ ಗೊಬ್ಬು ಗ್ರಾಮೀಣ ಕ್ರೀಡಾಕೂಟವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಇನ್ನಾ ಉದಯಕುಮಾರ್ ಶೆಟ್ಟಿ ಮಾತ ನಾಡಿ, ತುಳುನಾಡಿನ ಮಣ್ಣು ಅತ್ಯಂತ ಪವಿತ್ರವಾಗಿದ್ದು ಔಷಧೀಯ ಗುಣಗಳನ್ನೂ ಕೂಡ ಹೊಂದಿದೆ. ಈ ಮಣ್ಣಲ್ಲಿ ಶ್ರಮ ಪಟ್ಟು ದುಡಿದ ಹಿರಿಯ ಜೀವಗಳು ಇಂದಿಗೂ ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿವೆ. ಯುವ ಜನತೆ ಇಂತಹ ಕ್ರೀಡಾ ಕೂಟಗಳಲ್ಲಿ ಭಾಗವಹಿಸುವುದರಿಂದ ಸಧೃಡ ರಾಗುವರಲ್ಲದೆ ಅಪಾರ ಮಾನಸಿಕ ಸ್ಟೈರ್ಯ ಮತ್ತು ಆರೋಗ್ಯವಂತರಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

 ನಗರಸಭಾ ಸದಸ್ಯರಾದ ಸುಮಿತ್ರಾ ನಾಯಕ್, ಸುಕೇಶ್ ಕುಂದರ್, ಸುವರ್ಣ ಮಹೋತ್ಸವ ಸಮಿತಿ ಪದಾಧಿಕಾರಿ ಸದಾನಂದ ಪರ್ಕಳ ಮಾತನಾಡಿದರು. ಸಮಿತಿ ಕೋಶಾಧಿಕಾರಿ ಪ್ರಮೋದ್ ಕುಮಾರ್, ಗದ್ದೆಯ ಮಾಲಕ ಸುಬ್ಬಣ್ಣ ಶೆಟ್ಟಿ, ರಾಮದಾಸ್ ಹೆಗ್ಡೆ ಪರ್ಕಳ, ಮಾಧವ್ ಶೆಟ್ಟಿಗಾರ್, ಗೋಪಾಲ್ ಆಚಾರ್ಯ, ಪರ್ಕಳ ಜೇಸಿಸ್ ಅಧ್ಯಕ್ಷೆ ಆಶಾ, ಮರಿಯಪ್ಪ ಉಪಸ್ಥಿತರಿದ್ದರು. ಸುಧಾಕರ್ ಪೂಜಾರಿ ವಂದಿಸಿದರು. ಜಸ್ವಂತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News