×
Ad

ಉಳ್ಳಾಲ: ಮಸೀದಿಯ ಸದಸ್ಯನಿಗೆ ಹಲ್ಲೆ

Update: 2017-07-24 21:59 IST

ಉಳ್ಳಾಲ, ಜು. 24: ಸಭೆಯಲ್ಲಿ ಕೈಗೊಂಡ ತೀರ್ಮಾನದಿಂದ ಅಸಮಾಧಾನಗೊಂಡ ತಂಡವೊಂದು ಮುಕಚ್ಚೇರಿ ಜುಮಾ ಮಸೀದಿ ಆಡಳಿತ ಸಮಿತಿಯ ಸದಸ್ಯ ಅಬ್ದುಲ್ ಖಾದರ್ ಎಂಬವರಿಗೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿರುವ ಖಾದರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳ್ಳಾರಿ ಅಶ್ರಫ್, ಮಂದ ಆಸಿಫ್, ಅಹ್ಸನಿ ಬಶೀರ್, ರಿಯಾಝ್ ಮೊದಲಾದವರಿದ್ದ ತಂಡ ಖಾದರ್ ರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರವಿವಾರ ಮುಕ್ಕಚ್ಚೇರಿ ಜುಮಾ ಮಸೀದಿ ಆಡಳಿತ ಸಮಿತಿಯ ಸಭೆ ನಡೆದಿದ್ದು, ಉಳ್ಳಾಲ ದರ್ಗಾದಿಂದ ಹೊರತರಲಾಗಿರುವ ನೂತನ ಪಠ್ಯ ವಿದ್ಯಾರ್ಥಿಗಳಿಗೆ ನೀಡುವ ಸಂಬಂಧ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದರ ವಿರುದ್ಧ ತಂಡ ಗದ್ದಲ ಎಬ್ಬಿಸಿ ಬದಲಿಸುವಂತೆ ಪಟ್ಟು ಹಿಡಿದಿದೆ. ತಂಡದ ಆಗ್ರಹ ಒಪ್ಪದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News