×
Ad

ಈ ಖಾಲಿ ಖುರ್ಚಿಯ ಚಿತ್ರ ವೈರಲ್ ಆಗಿದ್ದು ಹೇಗೆ ಗೊತ್ತೇ...?

Update: 2017-07-25 16:31 IST

 ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಸೂಪರ್ ಮ್ಯಾನ್’ ಆಗಿ ಬಿಂಬಿಸಲು ಅವರ ಹಿಂಬಾಲಕರು ಯಾವುದೇ ಪ್ರಯತ್ನಗಳನ್ನು ಬಿಡುತ್ತಿಲ್ಲ. ಮೋದಿ ಯುವಕರಾಗಿದ್ದಾಗ ಕಚೇರಿಯ ನೆಲ ಗುಡಿಸುತ್ತಿದ್ದ ಚಿತ್ರವೊಂದು ವೈರಲ್ ಆಗಿದ್ದು ನೆನಪಿದೆಯೇ? ಬಳಿಕ ಅದು ಫೋಟೊಶಾಪ್ ಕರಾಮತ್ತು ಎನ್ನುವುದು ಬಟ್ಟಂಬಯಲಾಗಿತ್ತು. ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿಕೊಂಡು ಯಾರನ್ನೂ ಹೇಗೆ ಬೇಕಾದರೂ ತೋರಿಸಬಹುದು.

 ಇದೀಗ, ಹ್ಯಾಂಬರ್ಗ್‌ನಲ್ಲಿ ನಡೆದಿದ್ದ 2017 ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಖರ್ಚಿಯಲ್ಲಿ ಕುಳಿತುಕೊಂಡಿರುವ ಮೋದಿಯವರನ್ನು ವಿಶ್ವ ನಾಯಕರು ಸುತ್ತುವರಿದಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಆದರೆ ಈ ಚಿತ್ರದ ಅಸಲಿಯತ್ತು ಏನು?

ಇದೊಂದು ಕಪೋಲಕಲ್ಪಿತ ಚಿತ್ರ. ಅಸಲಿಗೆ ವಿಶ್ವ ನಾಯಕರು ಖಾಲಿ ಖುರ್ಚಿಯ ಸುತ್ತ ನಿಂತುಕೊಂಡು ಚರ್ಚಿಸುತ್ತಿದ್ದ ಮೂಲಚಿತ್ರ ಇಲ್ಲಿದೆ. ಫೋಟೊಶಾಪ್ ಮೂಲಕ ಮೋದಿಯವರನ್ನು ಆ ಚಿತ್ರದಲ್ಲಿ ಕುಳ್ಳಿರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ಅವರನ್ನು ಮಹಾನ್ ನಾಯಕನಂತೆ ಬಿಂಬಿಸಲು ಪ್ರಯತ್ನಿಸಲಾಗಿತ್ತು! ಇದಕ್ಕೆ ಸಾಕ್ಷ ನಿಮ್ಮ ಕಣ್ಣೆದುರಿಗೇ ಇದೆ......ನೋಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News