ರೈತ ಸಾರಥಿ ಯೋಜನೆಯನ್ನು ರೈತರು ಸದ್ಭಳಕೆ ಮಾಡಿಕೊಳ್ಳಿ : ಸಿ.ಡಿ.ನಾಯಕ್
ಮುಂಡಗೋಡ,ಜು.25 : ರೈತರಲ್ಲಿ ಕೃಷಿ ಬಳಕೆ ಟ್ರ್ಯಾಕ್ಟರ್ ಹೊಂದಿರುವ ರೈತರಿಗೆ ಚಾಲನಾ ಪರವಾನಿಗೆ ನೀಡುವ ಕಾರ್ಯಕ್ರಮ ಕರ್ನಾಟಕ ಸರಕಾರ ಹಮ್ಮಿಕೊಂಡಿದೆ.
ರೈತ ಸಾರಥಿ ಯೋಜನೆಯಡಿ ಕೃಷಿ ಬಳಕೆ ಟ್ರ್ಯಾಕ್ಟರ್ ಹೊಂದಿರುವ ರೈತರಿಗೆ ಮೋಟರ್ ವಾಹನದ ಕಾಯ್ದೆಯಡಿ 1988 ಮತ್ತು ನಿಯಮಾವಳಿ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ, ತರಬೇತಿ ನೀಡಿ ಕಲಿಕಾ ಚಾಲನಾ ಪರವಾನಿಗೆ ಮತ್ತು ಚಾಲನಾ ಅನುಜ್ಞಾಪತ್ರ ನೀಡುವ ಜೊತೆಗೆ ಸದರಿ ರೈತ ಹೊಂದಿರುವ ದ್ವಿಚಕ್ರ ವಾಹನಕ್ಕೆ ಚಾಲನಾ ಪರವಾನಿಗೆಯನ್ನು ನೀಡುವ ಯೋಜನೆಯನ್ನು ಕರ್ನಾಟಕ ಸರಕಾರ ಘೋಷಿಸಿರುತ್ತದೆ.
ಕಲಿಕಾ ಲೈಸನ್ಸ್ ಪಡೆಯಲು ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾವಳಿಗಳ ಅನ್ವಯ ಅಗತ್ಯವಿರುವ ದಾಖಲಾತಿಗಳೊಂದಿಗೆ ಅಭ್ಯರ್ಥಿಗಳು ಆನ್‍ಲೈನ್ ಅರ್ಜಿ ಸಲ್ಲಿಸಬೇಕು : ವಿಳಾಸ ಪುರಾವೆ ಪ್ರತಿ, ವಯೋಮಾನದ ದಾಖಲೆ ಪ್ರತಿ, ಭಾವಚಿತ್ರ 3, ವೈದ್ಯಕೀಯ ವಯೋಮಾನ ಮೀರಿದವರು ನಮೂನೆ 1 ಎ ರಲ್ಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕು
ಚಾಲನಾ ಲೈಸನ್ಸ್ ಪಡೆಯಲು ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾವಳಿಗಳ ಅನ್ವಯ ಅಗತ್ಯವಿರುವ ದಾಖಲಾತಿಗಳು : ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆದ 30 ದಿನಗಳ ನಂತರ ಲೈಸನ್ಸ ಗೆ ಆನ್‍ಲೈನ್ ಅರ್ಜಿಸಲ್ಲಿಸಬೇಕು, ಮೂಲ ಕಲಿಕಾ ಚಾಲನಾ ಅನುಜ್ಞಾ ಪತ್ರ, ವಾಹನ ಮತ್ತು ವಾಹನದ ಮೂಲ ದಾಖಲಾತಿಗಳಾದ ನೋಂದಣಿ ಪ್ರಮಾಣ ಪತ್ರ, ವಿಮೆ, ವಿಳಾಸ ಪುರಾವೆ ಪ್ರತಿ, ವಯೋಮಾನದ ದಾಖಲೆ ಪ್ರತಿ ಸಲ್ಲಿಸಿ ರೈತರು ರೈತ ಸಾರಥಿ ಯೋಜನೆಯ ಲಾಭ ಪಡೆಯಬೇಕು ಎಂದು - ಸಿ.ಡಿ.ನಾಯಕ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿರಸಿಯವರು ತಿಳಿಸಿರುತ್ತಾರೆ