ಇರುವೈಲು: ಅಂಗನವಾಡಿ ಮಕ್ಕಳಿಗೆ ಬ್ಯಾಗ್ ವಿತರಣೆ
Update: 2017-07-25 18:22 IST
ಮೂಡುಬಿದಿರೆ, ಜು. 25: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್‌ಟೌನ್ ವತಿಯಿಂದ ಇರುವೈಲಿನ 5 ಅಂಗನವಾಡಿಗಳ ಒಟ್ಟು 110 ಮಕ್ಕಳಿಗೆ ಬ್ಯಾಗ್‌ಗಳನ್ನು ವಿತರಿಸಲಾಯಿತು.
ರೋಟರಿ ಕ್ಲಬ್ ಮೂಡುಬಿದಿರೆ ಮಿಡ್‌ಟೌನ್ ಅಧ್ಯಕ್ಷ ಕುಮಾರ್ ಪೂಜಾರಿ, ಕಾರ್ಯದರ್ಶಿ ಕಿಶೋರ್ ನೇತೃತ್ವದಲ್ಲಿ ಇರುವೈಲು, ಪೂವಣಿಬೆಟ್ಟು, ಪೊರಿಮೇಲು, ಪೂಪಾಡಿಕಲ್ಲು, ಮುಳಿಬೆಟ್ಟು ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು.
ಇರುವೈಲು ಗ್ರಾಮ ಪಂಚಾಯತ್ ಸದಸ್ಯರಾದ ಜಯರಾಮ ಬಂಗೇರ, ಕುಸುಮ, ಮೋಹಿನಿ, ನಳಿನಿ, ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ ಪ್ರಶಾಂತ್ ಅಮೀನ್, ಪೂರ್ಣಿಮಾ, ವಾರಿಜಾ, ಚಂದ್ರಾವತಿ, ವೀಣಾ, ರೋಟರಿ ಕ್ಲಬ್ ಪದಾಧಿಖಾರಿಗಳು, ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು.