ನಗುವಿನಿಂದ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯ: ಪ್ರೊ.ಇ.ವಿ.ಸ್ವಾಮಿನಾಥನ್

Update: 2017-07-25 13:39 GMT

ಉಳ್ಳಾಲ,ಜು.25 : ನಗು ನಮ್ಮ ಜೀವನದ ಬಹಳ ಮುಖ್ಯ ಭಾಗವಾಗಿರುತ್ತದೆ, ಆದರೆ ತೋರಿಕೆಯ ನಗುವಿಗಿಂತ ಮನದಾಳದ ನಗು ಮುಖ್ಯ. ಆದ್ದರಿಂದ ನಾವು ಉತ್ತಮ ನಗುವಿನೊಂದಿಗೆ ಆರೋಗ್ಯವನ್ನು ವೃದ್ದಿಸಿಕೊಳ್ಳಬೇಕು ಎಂದು ಮುಂಬಯಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಇ.ವಿ.ಸ್ವಾಮಿನಾಥನ್ ಅಭಿಪ್ರಾಯಪಟ್ಟರು.

ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ನಡೆದ `ನಾಯಕತ್ವ ಕಲೆ, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಒತ್ತಡ ನಿರ್ವಹಣೆ'  ಎಂಬ ವಿಷಯದ ಅವರು ಉಪನ್ಯಾಸ ನೀಡಿದರು.

  ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ದೂರದ ಊರಿನ ಹಾಸ್ಟೆಲಿನಲ್ಲಿದ್ದು ಹೆತ್ತವರು, ಸಂಬಂಧಿಕರಿಗೆ ಪತ್ರದ ಮೂಲಕ ಯೋಗಕ್ಷೇಮ ವಿಚಾರಿಸುತ್ತಿರುವ ಕಾಲವಿತ್ತು. ಬದಲಾದ ತಂತ್ರಜ್ಞಾನದಿಂದ ಪತ್ರ ವ್ಯವಹಾರ ನಿಂತಿದ್ದು, ಸಂಬಂಧಗಳನ್ನು ದೂರವಾಗಿಸಲು ಕಾರಣವಾಯಿತು. ತಂತ್ರಜ್ಞಾನಗಳ ಮೂಲಕ ಬರೆಯುವ ಕಲೆ ಮೈಗೂಡಿಸಿಕೊಂಡಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಸಂಬಂಧಗಳನ್ನು ಬೆಳೆಸಲು ಸಾಧ್ಯ ಎಂದು ಹೇಳಿದರು.

ಮೂವತ್ತು ವರ್ಷಗಳ ಹಿಂದೆ ವ್ಯಕ್ತಿಯ ವಯಸ್ಸು, ಸ್ಥೂಲಕಾಯ ಹಾಗೂ ಅನುವಂಶಿಯತೆ ಪರಿಣಾಮ ಹೃದಯಾಘಾತವಾಗುತಿತ್ತು. ಆದರೆ ಇಂದು ಒತ್ತಡಗಳಿಂದ ಜನ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಒತ್ತಡವನ್ನು ಕಡಿಮೆಗೊಳಿಸಿಕೊಂಡಾಗ ಹೃದಯ ಹಗುರವಾಗಿರುತ್ತದೆ. ದೇಶದ್ಯಾಂತ ನಗು ಹಾಗೂ ಚಪ್ಪಾಳೆಯನ್ನು ಬಿಟ್ಟು ಉಳಿದ ಎಲ್ಲಾ ವಸ್ತುಗಳ ಮೇಲೆ ಜಿಎಸ್‍ಟಿ ದರವನ್ನು ಹಾಕಲಾಗಿರುವುದರಿಂದ ಕನಿಷ್ಟ ಉತ್ತಮ ವಿಚಾರ ಕೇಳಿದಾಗ ಚಪ್ಪಾಳೆ ತಟ್ಟಲು ಹಾಗೂ ನಗುವನ್ನು ಮೈಗೂಡಿಸಿಕೊಳ್ಳಿ ಎಂದರು.

ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ.ಬಿ.ಸತೀಶ್ ಕುಮಾರ್ ಭಂಡಾರಿ ಕಾರ್ಯಕ್ರಮದ ವಹಿಸಿದ್ದರು. ಕುಲಸಚಿವ ಡಾ.ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News