ಕಲ್ಮಾಡಿ ಚರ್ಚಿಗೆ ನೂತನ ಶಿಲುಬೆಯ ಪ್ರತಿಷ್ಠಾಪನೆ

Update: 2017-07-25 13:43 GMT

ಉಡುಪಿ, ಜು.25: ಕಲ್ಲಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ನವೀಕೃತ ಕಟ್ಟಡಕ್ಕೆ ಹೊಸ ಶಿಲುಬೆಯ ಪ್ರತಿಷ್ಠಾಪನೆ ಮಂಗಳವಾರ ಜರಗಿತು.

ರಾಜ್ಯದಲ್ಲಿಯೇ ಪ್ರಥಮವಾಗಿ ಹಡಗಿನ ವಿನ್ಯಾಸದಲ್ಲಿ ನಿರ್ಮಾಣಗೊಳ್ಳುತ್ತಿ ರುವ ಚರ್ಚಿನ ಪ್ರಮುಖ ಗೋಪುರದ ಮೇಲೆ ಸ್ಟೇನ್‌ಲೆಸ್ ಸ್ಟೀಲಿನ ಶಿಲುಬೆ ಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಶಿಲುಬೆಯು 3.5 ಮೀ. ಎತ್ತರ, ಎರಡು ಮೀ. ಅಗಲ ಮತ್ತು 250 ಕೆಜಿ ತೂಕ ಹೊಂದಿದೆ. ಪ್ರತಿಷ್ಠಾಪನೆಯ ಮುನ್ನ ಚರ್ಚಿನ ಪ್ರಧಾನ ಧರ್ಮಗುರು ವಂ. ಸ್ವಾಮಿ ಆಲ್ಬನ್ ಡಿಸೋಜ ನೇತೃತ್ವದಲ್ಲಿ ಪ್ರಾರ್ಥನಾ ವಿಧಿಗಳು ಜರಗಿದವು. ಬಳಿಕ ಕ್ರೇನ್ ಮೂಲಕ ಶಿಲುಬೆಯನ್ನು ಪ್ರಮುಖ ಗೋಪುರದ ಮೇಲೆ ಪ್ರತಿಷ್ಠಾಪಿಸಲಾಯಿತು.

ಎಲ್ಲಾ ಸಮುದಾಯದವರಿಂದ ಆರಾಧಿಸಲ್ಪಡುವ ಹಾಗೂ ಗೌರವಿಸಲ್ಪಡುವ ಸ್ಟೆಲ್ಲಾ ಮಾರಿಸ್ ಮಾತೆಯ ಇಗರ್ಜಿಯು ಸಂಪೂರ್ಣವಾಗಿ ಹಡಗಿನ ಮಾದರಿ ಯಲ್ಲಿ ನವೀಕೃತವಾಗಿ ನಿರ್ಮಾಣಗೊಳ್ಳುತ್ತಿದ್ದು, 10000 ಚದರ ಅಡಿ ವಿಸ್ತ್ರೀರ್ಣ ದ ಸುಮಾರು 700 ಮಂದಿ ಕುಳಿತು ಪ್ರಾರ್ಥನೆ ಸಲ್ಲಿಸಬಹುದಾದ ಈ ಚರ್ಚ್ 2018ರ ಜ.6ರಂದು ಲೋಕಾರ್ಪಣೆಗೊಳ್ಳಲಿದೆ.

ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ, ನವೀಕರಣ ಸಮಿತಿಯ ಸಂಚಾಲಕ ಲೂಯಿಸ್ ಲೋಬೊ, ಸ್ಥಳೀಯ ಕ್ರೈಸ್ತ ಧರ್ಮಗುರು ವಂ.ಸ್ಟೀವನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News