×
Ad

ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭ

Update: 2017-07-25 19:59 IST

ಭಟ್ಕಳ,ಜು.25: ಇಲ್ಲಿನ ಹೆಬಳೆ ಗ್ರಾ.ಪಂ ವ್ಯಾಪ್ತಿಯ ನ್ಯೂ ಶಮ್ಸ್ ಸ್ಕೂಲ್ ಐಸಿಎಸ್ಸಿ ಪಠ್ಯಕ್ರಮ ವಿದ್ಯಾರ್ಥಿಗಳ ಪ್ರಥಮ ಘಟಿಕೋತ್ಸವ ಸಮಾರಂಭ ಶಾಲಾ ಸಭಾಭವನದಲ್ಲಿ ಜರಗಿತು.

ಸಮಾರಂಭದ ಆಧ್ಯಕ್ಷತೆ ವಹಿಸಿ ಮಾತನಾಡಿದತ ರಬಿಯತ್‍ ಎಜ್ಯುಕೇಶನ್ ಸೂಸೈಟಿ ಅಧ್ಯಕ್ಷ ಅಬ್ದುಲ್‍ ಕಾದಿರ್ ಬಾಷಾ ರುಕ್ನುದ್ದೀನ್, ನ್ಯೂಶಮ್ಸ್ ಸ್ಕೂಲ್‍ನ  ಐಸಿಎಸ್ಸಿ ಪಠ್ಯಕ್ರಮದ ವಿದ್ಯಾರ್ಥಿಗಳು ಈ ವರ್ಷ ಜರಗಿದ 10ನೇ ವರ್ಗದ ಪರೀಕ್ಷೆಯಲ್ಲಿ ಶೇ.100% ಫಲಿತಾಂಶ ಸಾಧಿಸಿದ್ದು ಇದೊಂದು ಉತ್ತಮ ಬೆಳವಣೆಗೆಯಾಗಿದೆ ಎಂದರು.

ಶಿಕ್ಷಣವು ನಮ್ಮಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ.ತರಬಿಯತ್‍ಎಜ್ಯುಕೇಶನ್ ಸೂಸೈಟಿಯ ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದ್ದು ಸಮಾಜದಲ್ಲಿ ತನ್ನ ಜವಬ್ದಾರಿಯನ್ನು ಅರಿತು ಬದುಕುವ ಶಿಕ್ಷಣ ಇಲ್ಲಿ ಲಭ್ಯವಾಗುತ್ತಿದೆಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ  ಭಟ್ಕಳ ಮೂಲದಅಮೇರಿಕಾಕ್ಯಾಲಿಫೋರ್ನಿಯ ನಿವಾಸಿ ಮುಬಶ್ಶಿರ್ ಕಾಝಿಯಾ ಮಾತನಾಡಿ, ಕಲಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಜಾಣ ವಿದ್ಯಾರ್ಥಿಗಳು ಸ್ನೇಹ ಬೆಳೆಸಿ ಅವರನ್ನೂ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. 

ಇದೇ ಸಂದರ್ಭದಲ್ಲಿ 2016-17ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳಾದ ಅಮಾನುಲ್ಲಾ ಹಾಗೂ ಸುಹೈಲ್‍ ಕಾರ್ಯಕ್ರಮ ನಿರೂಪಿಸಿದರು.ಪ್ರಾಂಶುಪಾಲೆ ಫಹಮಿದಾ ಮುಲ್ಲಾ ಸ್ವಾಗತಿಸಿದರು.

ಎಸ್.ಎಸ್.ಎಲ್.ಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ ಹನಾ ಖಾಝಿಯಾ, ಖತಿಜಾಝುಹಾ, ಮರ್ಯಮ್ ಸಹರ್ ವಿದ್ಯಾರ್ಥಿನೀಯರುನ್ನು ಪುರಸ್ಕಲಾಯಿತು.

ಸಂಸ್ಥಯ ಉಪಾಧ್ಯಕ್ಷ ಸೈಯ್ಯದ್‍ ಅಶ್ರಫ್ ಬರ್ಮಾವರ್, ಹಳೆ ವಿದ್ಯಾರ್ಥಿ ಸಂಘದ ದುಬೈ ಮುಖ್ಯಸ್ಥ ರಝೀಮ್‍ ಎಸ್.ಎಂ, ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುಹಮ್ಮದ್‍ ರಝಾ ಮಾನ್ವಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News