ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳ ‘ಸ್ಪಾರ್ಕಲ್’ ನ್ಯೂಸ್ ಲೆಟರ್ ಬಿಡುಗಡೆ
ಭಟ್ಕಳ,ಜು.25: ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳ ಪ್ರಕಟಿಸಿ ಮುದ್ರಿಸಿದ ಆಂಗ್ಲ ಮಾಸಿಕ `ಶಮ್ಸ್ ಸ್ಪಾರ್ಕಲ್’ ನ್ಯೂಸ್ ಲೆಟರ್ ನ್ನು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿ ದೆಸೆಯಿಂದಲೆ ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ತಮ್ಮ ಭವಿಷ್ಯವನ್ನು ಇದೇ ಕ್ಷೇತ್ರದಲ್ಲಿ ಮುಂದುವರೆಸಬಹುದಾಗಿದೆ. ಮಾಧ್ಯಮ ಕ್ಷೇತ್ರ ಇಂದು ಅತ್ಯಂತ ಮಹತ್ವ ಪಡೆದುಕೊಳ್ಳುತ್ತಿದ್ದು ಇದರಲ್ಲಿ ಅವಕಾಶಗಳು ಬಹಳಷ್ಟಿದ್ದು ನಮ್ಮಲ್ಲಿ ಸೃಜನಶೀಲತೆ ಇದ್ದಲ್ಲಿ ಖಂಡಿತವಾಗಿಯೂ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ ಎಂದರು.
ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಅಮೇರಿಕಾದ ಕ್ಯಾಲಿಫೋರ್ನಿಯದ ಮುಬಶ್ಶರ್‍ಕಾಝಿಯಾ, ತರಬಿಯತ್‍ಎಜ್ಯುಕೇಶನ್ ಸೂಸೈಟಿಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್, ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಕಾರ್ಯಕಾರಿ ಸಮಿತಿಯ ಮೌಲಾನಾ ಅಝೀಝುರ್ರಹ್ಮಾನ್ ನದ್ವಿ,ಹಬೀಬುಲ್ಲಾ ರುಕ್ನುದ್ದೀನ್, ಎಸ್.ಎಂ. ಸೈಯ್ಯದ್ ಶಕೀಲ್, ಹಳೆ ವಿದ್ಯಾರ್ಥಿ ಸಂಘದದುಬೈ ಮುಖ್ಯಸ್ಥರಝೀಮ್‍ಎಸ್.ಎಂ, ಶಮ್ಸ್‍ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುಹಮ್ಮದ್ ರಝಾ ಮಾನ್ವಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖಾಧ್ಯಕ್ಷ ಮುಜಾಹಿದ್ ಮುಸ್ತಫಾ, ಮೌಲಾನ ಸೈಯ್ಯದ್‍ಖುತುಬ್ ಬರ್ಮಾವರ್, ಉಪಸ್ಥಿತರಿದ್ದರು.