ಅಧ್ಯಕ್ಷರ ಆದೇಶದಂತೆ ಮಾಲ್ದೀವ್ಸ್ ಸಂಸತ್ತಿಗೆ ಬೀಗ ಹಾಕಿದ ಭದ್ರತಾ ಪಡೆಗಳು

Update: 2017-07-25 14:49 GMT

ಕೊಲಂಬೊ, ಜು. 25: ಮಾಲ್ದೀವ್ಸ್ ಅಧ್ಯಕ್ಷ ಯಮೀನ್ ಅಬ್ದುಲ್ ಗಯೂಮ್‌ರ ಆದೇಶದಂತೆ ಭದ್ರತಾ ಪಡೆಗಳು ಸೋಮವಾರ ಸಂಸತ್ತಿಗೆ ಬೀಗ ಹಾಕಿದ ಬಳಿಕ, ಆವರಣದಲ್ಲಿ ಸಂಘರ್ಷ ತಲೆದೋರಿತು. ಆಕ್ರೋಶಭರಿತ ಪ್ರತಿಪಕ್ಷ ಸಂಸದರು ಸಂಸತ್ತಿಗೆ ನುಗ್ಗಲು ಯತ್ನಿಸಿದರು.

2008ರಿಂದ ಬಹುಪಕ್ಷೀಯ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಂದಿನಿಂದ ಮಾಲ್ದೀವ್ಸ್ ಗಳಿಸಿರುವ ಪ್ರಜಾಸತ್ತಾತ್ಮಕ ವೌಲ್ಯಗಳನ್ನು ನಾಶಪಡಿಸಲು ಅಧ್ಯಕ್ಷರು ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ಪ್ರತಿಪಕ್ಷಗಳು ಆರೋಪಿಸಿವೆ.

ಸ್ಪೀಕರ್ ಅಬ್ದುಲ್ಲಾ ಮಸೀಹ್ ಮುಹಮ್ಮದ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಸೋಮವಾರ ಮತದಾನ ನಡೆಯಬೇಕಾಗಿತ್ತು. ನಿರ್ಣಯದ ಪರವಾಗಿ 85 ಸದಸ್ಯ ಬಲದ ಸದನದಲ್ಲಿ 45 ಸಂಸದರ ಬೆಂಬಲವಿತ್ತು ಎಂಬುದಾಗಿ ಪ್ರತಿಪಕ್ಷಗಳು ಹೇಳಿವೆ. ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದ್ದರೆ, ಅದು ಅಧ್ಯಕ್ಷರ ಅಧಿಕಾರವನ್ನು ಪ್ರಶ್ನಿಸುತ್ತಿತ್ತು.

ಸಂಸತ್ತಿನ ಆವರಣವನ್ನು ಪ್ರವೇಶಿಸಲು ಯತ್ನಿಸಿದ ಪ್ರತಿಪಕ್ಷ ಸಂಸದರನ್ನು ಭದ್ರತಾ ಸಿಬ್ಬಂದಿ ಹೊರದಬ್ಬಿದರು. ಪೊಲೀಸರು ಮೆಣಸಿನ ಹುಡಿ ಸ್ಪ್ರೇಯನ್ನೂ ಎರಚಿದರು ಎಂದು ಪ್ರತಿಪಕ್ಷಗಳ ಸಂಸದರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News