ಅಂಗಡಿಗೆ ನುಗ್ಗಿ ದಾಂಧಲೆ
Update: 2017-07-25 20:25 IST
ಹೆಬ್ರಿ, ಜು.25: ಬೇಳಂಜೆ ಪೇಟೆಯಲ್ಲಿನ ಅಂಗಡಿಯೊಂದಕ್ಕೆ ನುಗ್ಗಿದ ವ್ಯಕ್ತಿ ಯೊಬ್ಬರು ಸಾಮಾನುಗಳನ್ನು ಹಾನಿಗೈದು ಸಾವಿರಾರು ರೂ. ನಷ್ಟ ಉಂಟು ಮಾಡಿರುವ ಘಟನೆ ನಡೆದಿದೆ.
ಜ್ಯೋತಿ ಶೆಟ್ಟಿ (39) ಎಂಬವರ ಶ್ರೀದುರ್ಗಾ ಜನರಲ್ ಸ್ಟೋರ್ ಹಾಗೂ ಹೊಟೇಲಿಗೆ ಕಂಚರಕಾಳು ಕುಚ್ಚೂರು ನಿವಾಸಿ ಹೃದಯ ಶೆಟ್ಟಿ ಎಂಬಾತ ನುಗ್ಗಿ ಜ್ಯೋತಿ ಶೆಟ್ಟಿಯವರನ್ನು ದೂಡಿ ಹಾಕಿ ಅಂಗಡಿಯಲ್ಲಿದ್ದ ತಿಂಡಿ-ತಿನಿಸು, ಮೊಟ್ಟೆ, ಸ್ಟೀಲ್ ಹಾಗೂ ಅಲ್ಯೂಮಿನಿಯಂ ಪಾತ್ರೆಯನ್ನೆಲ್ಲಾ ರಸ್ತೆಗೆ ಬಿಸಾಡಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ದೂರಲಾಗಿದೆ. ಈತ ನಾಶಪಡಿಸಿದ ಸೊತ್ತಿನ ಒಟ್ಟು ವೌಲ್ಯ 30,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.