×
Ad

ಸನ್ಮಾನ ಸ್ವೀಕರಿಸಲಿರುವ ಶತಾಯುಷಿ ಯೋಧ

Update: 2017-07-25 20:54 IST

ಉಳ್ಳಾಲ, ಜು. 25: ಮಂಗಳೂರು ಕರಾವಳಿ ಸಾಂಸ್ಕೃತಿಕ ಪರಿಷತ್ ಇದರ ವತಿಯಿಂದ ಕಾರ್ಗಿಲ್ ವಿಜಯ್ ದಿವಸದ ಪ್ರಯುಕ್ತ ಶತಾಯುಷಿ ಹಾಗೂ ಹಿರಿಯ ಯೋಧ ಸೋಮೇಶ್ವರ ನಿವಾಸಿ ಕ್ಯಾಪ್ಟನ್ ಬಿ.ಎಸ್.ಬಾಲಕೃಷ್ಣ ರೈ ಇವರಿಗೆ ಸನ್ಮಾನ ಕಾರ್ಯಕ್ರಮ ಸ್ವಗೃಹದಲ್ಲಿ ಜು. 26ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಹವಾಲ್ದಾರರಾಗಿ, ಹಿರಿಯ ಅಧಿಕಾರಿಯಾಗಿ, ಸುಬೇದಾರರಾಗಿ, ಮೇಜರ್, ಲೆಪ್ಟಿನೆಂಟ್ ಆಗಿ ಸೇವೆ ಸಲ್ಲಿಸಿರುವ ಬಾಲಕೃಷ್ಣ ರೈ ಇವರು 1972ರಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದರು. ಸ್ವಾತ್ರಂತ್ಯ ಪೂರ್ವದಲ್ಲಿ ಬರ್ಮಾ, ಪಾಕಿಸ್ತಾನದ ರಾವಲ್ಪಿಂಡಿ, ಅಬಾಟಾಬಾದ್‌ನಲ್ಲಿದ್ದುಕೊಂಡು ದೇಶಸೇವೆ ಸಲ್ಲಿಸಿರುತ್ತಾರೆ.

ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿ ದೇಹದ ಅಂಗಾಂಗಗಳನ್ನು ಕಳೆದುಕೊಂಡವರಲ್ಲಿ ಇವರು ಒಬ್ಬರು. ಇದೀಗ 100ನೇ ವಯಸ್ಸಿನಲ್ಲಿ ಪತ್ನಿ ಮಕ್ಕಳು ಹಾಗೂ ಕುಟುಂಬಿಕರೊಂದಿಗೆ ಅತ್ಯಂತ ಕ್ರೀಯಾಶೀಲರಾಗಿ, ಕುಟುಂಬದ ಹಿರಿಯರಾಗಿ, ಸಮಾಜಕ್ಕೆ ಉನ್ನತ ವ್ಯಕ್ತಿಯಾಗಿ ಆದರ್ಶಪ್ರಾಯರಾಗಿರುವ ಇವರು ಸನ್ಮಾನವನ್ನು ಸ್ವೀಕರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News