ಮಂಗಳೂರಿನಿಂದ ಹಜ್ ಯಾತ್ರೆಗೆ ತೆರಳಿದ 316 ಯಾತ್ರಾರ್ಥಿಗಳು

Update: 2017-07-25 15:40 GMT

ಮಂಗಳೂರು, ಜು.25: ಹಜ್ ಸಮಿತಿ ವತಿಯಿಂದ ಬಜ್ಪೆ ವಿಮಾನ ನಿಲ್ದಾಣದಿಂದ ಮಂಗಳವಾರ 2ನೆ ಮತ್ತು ಮೂರನೆ ತಂಡ ಹಜ್ ಯಾತ್ರೆ ಕೈಗೊಂಡಿತು.

ಎರಡು ಪ್ರತ್ಯೇಕ ವಿಮಾನಗಳಲ್ಲಿ ತಲಾ 158 ಮಂದಿಯಂತೆ ಒಟ್ಟು 316 ಮಂದಿ ಪವಿತ್ರ ಹಜ್ ಯಾತ್ರೆ ಕೈಗೊಂಡರು.ಇದಕ್ಕೂ ಮುನ್ನ ಹಜ್ ಯಾತ್ರಿಕರಿಗೆ ಬಜ್ಪೆಯ ಅನ್ಸಾರ್ ಶಾಲೆ ಆವರಣದಲ್ಲಿ ಬೀಳ್ಕೊಡಲಾಯಿತು.

ಅನ್ಸಾರ್ ಶಾಲೆಯಿಂದ ವಿಮಾನ ನಿಲ್ದಾಣದವರೆಗೆ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹಜ್ ಯಾತ್ರಿಕರ 158 ಮಂದಿಯ ಮೊದಲ ತಂಡವು ಬೆಳಗ್ಗೆ 5 ಬಸ್‌ಗಳಲ್ಲಿ ಹೊರಟರೆ, ಎರಡನೇ ತಂಡವು ಮಧ್ಯಾಹ್ನ 4 ಬಸ್‌ಗಳಲ್ಲಿ ಏರ್‌ಪೋರ್ಟ್‌ನತ್ತ ಪ್ರಯಾಣ ಬೆಳೆಸಿದವು. ಮೊದಲ ತಂಡವನ್ನು ಹೊತ್ತ ವಿಮಾನವು ಬೆಳಗ್ಗೆ 12: 50 ಮತ್ತು ಎರಡನೆ ತಂಡದ ವಿಮಾನವು ಸಂಜೆ 4:40ಕ್ಕೆ ಬಜ್ಪೆ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದವು.

ಮೊದಲ ತಂಡದಲ್ಲಿ 69 ಮಂದಿ ಪುರುಷರು ಹಾಗೂ 89 ಮಂದಿ ಮಹಿಳೆಯರಿದ್ದರೆ, ಎರಡನೆ ತಂಡದಲ್ಲಿ 73 ಮಂದಿ ಪುರುಷರು ಹಾಗೂ 85 ಮಂದಿ ಮಹಿಳೆಯರ ಸಹಿತ ಒಟ್ಟು 316 ಮಂದಿ ಪವಿತ್ರ ಹಜ್ ಯಾತ್ರೆಗೆ ತೆರಳಿದರು.

 ಕೊನೆಯ ಎರಡು ತಂಡಗಳು ಬುಧವಾರ ಹಜ್ ಯಾತ್ರೆಗೆ ಪ್ರಯಾಣ ಬೆಳೆಸಲಿವೆ. ಮೊದಲ ತಂಡದಲ್ಲಿ 82 ಪುರುಷರು ಹಾಗೂ 76 ಮಂದಿ ಮಹಿಳೆಯರ ಸಹಿತ 158 ಮಂದಿ ಹಾಗೂ ಎರಡನೆ ತಂಡದಲ್ಲಿ 69 ಪುರುಷರು ಹಾಗೂ 68 ಮಹಿಳೆಯರ ಸಹಿತ ಒಟ್ಟು 137 ಮಂದಿ ಯಾತ್ರಿಕರು ಯಾನ ಬೆಳೆಸಲಿದ್ದಾರೆ ಎಂದು ರಾಜ್ಯ ಹಜ್ ಸಮಿತಿಯ ಕೋರ್ಡಿನೇಟರ್ ಮುಹೀರ್ ಬಾಶ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News