×
Ad

ಜು.26: ಪ್ರೊ.ರಾವ್‌ಗೆ ಶೃದ್ಧಾಂಜಲಿ

Update: 2017-07-25 21:48 IST

ಉಡುಪಿ, ಜು.25: ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದ ದೇಶದ ಅಗ್ರಗಣ್ಯ ಬಾಹ್ಯಾಕಾಶ ವಿಜ್ಞಾನಿ, ಉಪಗ್ರಹಗಳ ಪಿತಾಮಹ ಪ್ರೊ.ಯು.ಆರ್. ರಾವ್ ಇವರಿಗೆ ಜು.26ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶೃದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿದೆ.

ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮಿಜಿ ನೇತೃತ್ವದಲ್ಲಿ ಸಂಜೆ 5  ಗಂಟೆಗೆ ಈ ಸಭೆ ನಡೆಯಲಿದೆ. ಸಭೆಯಲ್ಲಿ ಶ್ರೀವಿಶ್ವ ಪ್ರಸನ್ನ ತೀರ್ಥರು ಉಪಸ್ಥಿತರಿರುವರು. ವಿಜ್ಞಾನಿಗಳು, ಪ್ರಾಧ್ಯಾಪಕರು, ಪ್ರೊ.ರಾವ್ ಅವರ ಅಭಿಮಾನಿಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಸಂಘಟಕರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News