ತೃತೀಯ ಲಿಂಗಿಗಳಿಗೆ ಕೇರಳ ಚರ್ಚ್‌ನಲ್ಲಿ ವಿಚಾರಸಂಕಿರಣ
Update: 2017-07-25 22:46 IST
ತಿರುವನಂತಪುರ, ಜು. 25: ತೃತೀಯಲಿಂಗಿ ಸಮುದಾಯವನ್ನು ಮೇಲೆತ್ತಲು ಕೇರಳದ ಮಾರ್ತೋಮಾ ಸಿರಿಯನ್ ಚರ್ಚ್ ಜುಲೈ 29ರಂದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಚರ್ಚ್ ತಳಸ್ತರದ ಗುಂಪುಗಳ ಅಭಿವೃದ್ಧಿ ಹಾಗೂ ಶಿಕ್ಷಣಕ್ಕಾಗಿ ಸಮಗ್ರ ಕಾರ್ಯ ಕ್ರಮವನ್ನು ಈಗಾಗಲೇ ಆರಂಭಿಸಿದೆ. ಹಾಗೂ ಪರ್ಯಾಯ ಜೀವನ ಕಂಡುಕೊಳ್ಳಲು ನೆರವಾಗುತ್ತಿದೆ.
ತೃತೀಯ ಲಿಂಗಿಗಳನ್ನು ಸಮಾಜದ ಮುಂಚೂಣಿಗೆ ತರುವ ಹಿನ್ನೆಲೆಯಲ್ಲಿ ನಡೆಸುತ್ತಿರುವ ಸಾಮಾಜಿಕ ಕಾರ್ಯಕ್ರಮದ ಭಾಗವಾಗಿ ಈ ವಿಚಾರಸಂಕಿರಣವನ್ನು ಆಯೋಜಿಸಿದ್ದೇವೆ ಎಂದು ಚರ್ಚ್‌ನ ಪ್ರಕಟನೆ ತಿಳಿಸಿದೆ.