ಮಂಗಳೂರು: ಹಜ್ ಯಾತ್ರೆಯ ಕೊನೆಯ ತಂಡಗಳ ಯಾನ

Update: 2017-07-26 13:38 GMT

ಮಂಗಳೂರು, ಜು.26: ಪವಿತ್ರ ಹಜ್ ಯಾತ್ರೆಯ 4 ಮತ್ತು 5ನೆ (ಕೊನೆಯ) ತಂಡವು ಕ್ರಮವಾಗಿ ಬುಧವಾರ ಮಧ್ಯಾಹ್ನ 12:50 ಹಾಗು 5.05ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದೆ.

4ನೆ ತಂಡದಲ್ಲಿ 158 ಮತ್ತು 5ನೆ ತಂಡದಲ್ಲಿ 137 ಯಾತ್ರಾರ್ಥಿಗಳು ಪ್ರಯಾಣ ಬೆಳೆಸಿದರು. 4ನೆ ತಂಡದೊಂದಿಗೆ ತೆರಳಬೇಕಾಗಿದ್ದ ಓರ್ವ ಮಹಿಳೆ ಅನಾರೋಗ್ಯಕ್ಕೀಡಾದುದರಿಂದ ಅವರು ಯಾತ್ರಾರ್ಥಿಗಳೊಂದಿಗೆ ತೆರಳಲಿಲ್ಲ ಎಂದು ತಿಳಿದು ಬಂದಿದೆ.

ಸೋಮವಾರ 159 ಮತ್ತು ಮಂಗಳವಾರ 316 ಹಾಗು ಬುಧವಾರ 295 ಹೀಗೆ ಕಳೆದ ಮೂರು ದಿನದಲ್ಲಿ 5 ತಂಡವಾಗಿ 770 ಮಂದಿ ಯಾತ್ರಾರ್ಥಿಗಳು ಹಜ್ ಪ್ರಯಾಣ ಬೆಳೆಸಿದರು. ಅದರಲ್ಲಿ 372 ಪುರುಷರು ಮತ್ತು 398 ಮಹಿಳೆಯರಿದ್ದಾರೆ.

ಈ ಸಂದರ್ಭ ಮಂಗಳೂರು ಹಜ್ ಕ್ಯಾಂಪ್ ಅಧ್ಯಕ್ಷ ಹಾಜಿ ಯೆನೆಪೊಯ ಮುಹಮ್ಮದ್ ಕುಂಞಿ, ರಾಜ್ಯ ಹಜ್ ಕಮಿಟಿ ಸದಸ್ಯ ಹಾಜಿ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಪದಾಧಿಕಾರಿಗಳಾದ ಎಸ್.ಎಂ. ರಶೀದ್ ಹಾಜಿ, ಹಾಜಿ ನಕ್ವಾ ಯಹ್ಯಾ, ಸಿ. ಮಹ್ಮೂದ್ ಹಾಜಿ, ಎಂ.ಎ. ಮುಹಮ್ಮದ್ ಹಾಜಿ, ಹನೀಫ್ ಹಾಜಿ ಬಂದರ್, ಹನೀಫ್ ಬಜ್ಪೆ, ರಫೀಕ್ ಹಾಗು ಜಿಲ್ಲಾ ವಕ್ಫ್ ಅಧಿಕಾರಿ ಹಾಜಿ ಅಬೂಬಕರ್ ಮತ್ತಿತರರು ಉಪಸ್ಥಿತರಿದ್ದರು.
 

ಕೃತಜ್ಞತೆ: ಹಜ್ ಯಾತ್ರೆಯ ಯಶಸ್ಸಿಗೆ ಸಹಕರಿಸಿದ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರು, ಎಮಿಗ್ರೇಶನ್, ಕಸ್ಟಮ್ಸ್ ಅಧಿಕಾರಿಗಳು, ಟರ್ಮಿನಲ್ ಮ್ಯಾನೇಜರ್, ಭದ್ರತಾ ಸಿಬ್ಬಂದಿ ವರ್ಗ, ಪೊಲೀಸ್ ಇಲಾಖೆ ಹಾಗು ಹಜ್ ನಿರ್ವಹಣಾ ಸಮಿತಿ ಹಾಗೂ ಇತರ ಸಂಘ ಸಂಸ್ಥೆಗಳ ಕಾರ್ಯಕರ್ತರಿಗೆ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಜಿ ಯೆನಪೊಯ ಮುಹಮ್ಮದ್ ಕುಂಞಿ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News