ಇಂಡಿಪೆಂಡೆನ್ಸ್ ಫುಟ್ಬಾಲ್ ಪಂದ್ಯಾಟಕ್ಕೆ ಚಾಲನೆ
Update: 2017-07-26 19:10 IST
ಮಂಗಳೂರು, ಜು.26: ದ.ಕ.ಜಿಲ್ಲಾ ಫುಟ್ಬಾಲ್ ಎಸೋಸಿಯೇಶನ್ ವತಿಯಿಂದ 21ನೆ ಆವೃತ್ತಿಯ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟವನ್ನು ಮೇಯರ್ ಕವಿತಾ ಸನಿಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸೋಲು ಗೆಲುವಿನ ಲೆಕ್ಕಾಚಾರ ಹಾಕದೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತೀ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಬಾಲಕೃಷ್ಣ ಪೈ, ಯುವಜನ ಇಲಾಖಾಧಿಖಾರಿ ಪ್ರದೀಪ್ ಡಿಸೋಜ, ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ, ಪದಾಧಿಕಾರಿಗಳಾದ ಅನಿಲ್ ಕುಮಾರ್, ಯುವರಾಜ್, ಲತೀಫ್, ಉಮೇಶ್ ಉಚ್ಚಿಲ್ ಮತ್ತಿತರರಿದ್ದರು.
ಪಂದ್ಯಾಟವು ಬಾಲಕರ ಮತ್ತು ಬಾಲಕಿಯರ, ಪ್ರಾಥಮಿಕ ಮತ್ತು ಪ್ರೌಢ, ಪದವಿ ಪೂರ್ವ ಹಾಗು ಕಾಲೇಜು ಹೀಗೆ 7 ವಿಭಾಗಗಳಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಿ.ಎಂ.ಅಸ್ಲಂ, ತಿಳಿಸಿದರು.
ಕಾರ್ಯಕ್ರಮದಲ್ಲಿ ಮೇಯರ್ ಕವಿತಾ ಸನಿಲ್‌ರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಹುಸೇನ್ ಬೋಳಾರ್ ಕಾರ್ಯಕ್ರಮ ನಿರೂಪಿಸಿದರು.