ಹರ್ಯಾಣ ಸರಕಾರ, ರೈಲ್ವೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೋಟಿಸ್
Update: 2017-07-26 20:06 IST
ಹೊಸದಿಲ್ಲಿ, ಜು.26: ಬಾಲಕ ಜುನೈದ್ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರೈಲ್ವೆ ಇಲಾಖೆ ಹಾಗೂ ಹರ್ಯಾಣ ಸರಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿದೆ.
“ರಾಜ್ಯ ಪೊಲೀಸ್ ಹಾಗೂ ಸರಕಾರಿ ರೈಲ್ವೆ ಪೊಲೀಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿಲ್ಲ” ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದ ಶೆಹಝಾದ್ ಪೂನವಾಲ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ರೈಲ್ವೆ ಬೋರ್ಡ್ ನ ಚೇರ್ ಮೆನ್ ಹಾಗೂ ಹರ್ಯಾಣ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹರ್ಯಾಣ ಡಿಜಿಪಿಗೆ ನೋಟಿಸ್ ನೀಡಲಾಗಿದೆ.
“ಅಲ್ಪಸಂಖ್ಯಾತ ಸಮುದಾಯದ ಬಾಲಕನೊಬ್ಬನ ಹತ್ಯೆಯ ಬಗ್ಗೆ ರಾಜ್ಯದ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸುತ್ತಿಲ್ಲ” ಎನ್ನುವ ದೂರಿನ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದ್ದು, 4 ವಾರಗಳೊಳಗಾಗಿ ವರದಿ ನೀಡಬೇಕು” ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.