ಜನಪರ ಮರಳು ನೀತಿಗೆ ಜಿಲ್ಲಾಧಿಕಾರಿಗೆ ಮನವಿ

Update: 2017-07-26 14:57 GMT

ಮಂಗಳೂರು, ಜು.26: ಜಿಲ್ಲೆಯಲ್ಲಿ ಜನಪರ ಮರಳು ನೀತಿ ತರಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಕಟ್ಟಡ ಕಾರ್ಮಿಕರ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಹೇರಳವಾಗಿ ದೊರೆಯುತ್ತಿದ್ದ ಮರಳಿನ ಮೇಲಿನ ನಿಷೇಧದ ಹೆಸರಿನಲ್ಲಿ ಜಿಲ್ಲೆಯ ಕಾಮಗಾರಿಗಳಿಗೆ ಮರಳು ಸರಿಯಾಗಿ ಪೂರೈಕೆಯಾಗದೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ. ಮರಳಿನ ಮೇಲಿನ ನಿಷೇಧದ ನೆಪವನ್ನಿಟ್ಟುಕೊಂಡು ಮರಳು ದಂಧೆ ಕರಾವಳಿ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. 3,500 ರೂ.ಗೆ ಸಿಗುತ್ತಿದ್ದ 2 ಯೂನಿಟ್ ಮರಳು 12,000 ರೂ.ಗೆ ಏರಿಕೆಯಾಗಿದೆ. ಜಿಲ್ಲೆಯ ನಾನಾ ಕಡೆಗಳಲ್ಲಿ ಮರಳು ವ್ಯಾಪಕವಾಗಿ ಶೇಖರಣೆಯಾಗಿದ್ದರೂ ಜಿಲ್ಲೆಯ ಕಾಮಗಾರಿಗಳಿಗೆ ಇದು ಉಪಯೋಗವಾಗುತ್ತಿಲ್ಲ. ರಾಜ್ಯದ ಇತರ ಜಿಲ್ಲೆಗಳಿಗೆ ಹಾಗೂ ಇತರೆ ರಾಜ್ಯಗಳಿಗೆ ಕಾಲಸಂತೆಯಲ್ಲಿ ಮಾರಾಟವಾಗುತ್ತಿದೆ. ಮರಳು ತೆಗೆಯುವಲ್ಲಿ ಡೋಸರ್ ಹಾಗೂ ಜೆಸಿಬಿ ಬಳಕೆ ನಿಷೇಧಿಸಲಾಗಿದ್ದರೂ ಎಲ್ಲ ಕಡೆಗಳಲ್ಲಿ ಜೆಸಿಬಿ ಹಾಗೂ ಡೋಸರ್ ಬಳಕೆ ಮಾಡಲಾಗುತ್ತಿದೆ ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಜಿಲ್ಲಾ ನಾಯಕರಾದ ಜಯಂತ್ ನಾಯ್ಕಿ, ಜನಾರ್ದನ ಕುತ್ತಾರ್, ಜಯಶೀಲ, ಮನೋಜ್ ವಾಮಂಜೂರು, ಪ್ರೇಮನಾಥ್ ಜಲ್ಲಿಗುಡ್ಡೆ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News