ಚೀನಾ ವಿರೋಧದ ಹೊರತಾಗಿಯೂ ಬೋಟ್ಸ್‌ವಾನಕ್ಕೆ ದಲಾಯಿ ಭೇಟಿ
Update: 2017-07-26 20:30 IST
ಗ್ಯಾಬರೋನಿ (ಬೋಟ್ಸ್‌ವಾನ), ಜು. 26: ಚೀನಾದ ತೀವ್ರ ವಿರೋಧದ ಹೊರತಾಗಿಯೂ, ಮುಂದಿನ ತಿಂಗಳು ಭೇಟಿ ನೀಡಲು ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರಿಗೆ ತಾನು ಅನುಮೋದನೆ ನೀಡುವುದಾಗಿ ಬೋಟ್ಸ್‌ವಾನ ಮಂಗಳ ಹೇಳಿದೆ.
ದಲಾಯಿ ಲಾಮಾ ಟಿಬೆಟ್‌ನ ಸ್ವಾತಂತ್ರಕ್ಕಾಗಿ ಹೋರಾಡುವ ವಿಭಜನವಾದಿ ಎಂಬುದಾಗಿ ಚೀನಾ ಭಾವಿಸುತ್ತಿದೆ ಹಾಗೂ ಅವರನ್ನು ಸ್ವಾಗತಿಸುವ ವಿದೇಶಿ ಸರಕಾರಗಳನ್ನು ಖಂಡಿಸುತ್ತದೆ.
ದಲಾಯಿ ಲಾಮಾರ ಭೇಟಿ ‘ಸಂಪೂರ್ಣ ಖಾಸಗಿ’ ಎಂದು ಬೋಟ್ಸ್‌ವಾನ ವಿದೇಶ ಸಚಿವೆ ಪೆಲೊನೊಮಿ ವೆನ್ಸನ್-ಮೊಯಿಟೊಯಿ ಸಂಸದರಿಗೆ ತಿಳಿಸಿದರು. ಆದರೆ, ಅವರಿಗೆ ವಿದೇಶಿ ಗಣ್ಯವ್ಯಕ್ತಿಯ ಸ್ಥಾನಮಾನವನ್ನು ನೀಡಲಾಗುವುದು ಎಂದರು.
ದಲಾಯಿ ಲಾಮಾ ಬೋಟ್ಸ್‌ವಾನ ಅಧ್ಯಕ್ಷ ಇಯಾನ್ ಖಾಮರನ್ನು ಭೇಟಿಯಾಗುತ್ತಾರೆ ಎಂಬ ಕಳೆದ ವಾರದ ಪ್ರಕಟನೆಯನ್ನು ವಿದೇಶ ಸಚಿವೆ ಖಚಿತಪಡಿಸಲಿಲ್ಲ. ಆ ಹೇಳಿಕೆಯ ಹಿನ್ನೆಲೆಯಲ್ಲಿ ಬೀಜಿಂಗ್ ಕಟು ಎಚ್ಚರಿಕೆ ಹೊರಡಿಸಿತ್ತು.